ಉಪ್ಪಿನಂಗಡಿ: ಭಾರೀ ಗಾಳಿ ಮಳೆ-ಹಾನಿ

0

ಉಪ್ಪಿನಂಗಡಿ: ಸೋಮವಾರ ಸಂಜೆ ಉಪ್ಪಿನಂಗಡಿಯಲ್ಲಿ ಸಿಡಿಲಬ್ಬರದೊಂದಿಗೆ ಸುರಿದ ಭಾರೀ ಗಾಳಿ ಮಳೆಗೆ ಬಹಳಷ್ಟು ಹಾನಿ ಸಂಭವಿಸಿದ್ದು, ಗಾಳಿಯ ಹೊಡೆತಕ್ಕೆ ಸಿಲುಕಿ ಹಲವಾರು ರಚನೆಗಳು ಹಾನಿಗೀಡಾದ ಘಟನೆ ವರದಿಯಾಗಿದೆ.


ಉಪ್ಪಿನಂಗಡಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆನ್ನಿಗೆಯೇ ಭಾರೀ ಸಿಡಿಲಾರ್ಭಟಕ್ಕೆ ಸಿಲುಕಿ ವಿದ್ಯುತ್ ಸರಬರಾಜಿನಲ್ಲಿ ಅಳವಡಿಸಲಾದ ಸಲಕರಣೆಗಳು ಹಾನಿಗೀಡಾಗಿದೆ . ಇದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಯಿತು. ಗಾಳಿಗೆ ಸಿಲುಕಿ ಉಪ್ಪಿನಂಗಡಿ ಪರಿಸರದಲಿ 5 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದೆ. ಮಧ್ಯಾಹ್ನದ ವರೆಗೆ ಸುಡುವ ಬಿಸಿಲ ವಾತಾವರಣವಿದ್ದು, ಸಾಯಂಕಾಲವಾಗುತ್ತಿದ್ದಂತೆಯೇ ಆಕಾಶದಲ್ಲಿ ಕರಿಮೋಡ ಆವರಿಸಿ ಕತ್ತಲಾದಂತೆ ಭಾಸವಾಗಿ ಬಿರುಸಿನ ಮಳೆ ಸುರಿಯಲಾರಂಭಿಸಿತ್ತು. ಗಾಳಿ ಮಳೆಗೆ ಸಿಲುಕಿ ಛಾವಣಿಗೆ ಅಳವಡಿಸಲಾದ ಶೀಟ್ ಗಳು, ಜಾಹೀರಾತು ಫಲಕಗಳು ಎಲ್ಲೆಂದರಲ್ಲಿ ಹಾರಿ ಧರೆಗುರುಳಿತ್ತು. ಗಾಳಿ ಮಳೆಗೆ ಸಿಲುಕಿ ಕೃಷಿ ಬೆಳೆಗಳೂ ಹಾನಿಗೀಡಾಗಿರುತ್ತದೆ.

LEAVE A REPLY

Please enter your comment!
Please enter your name here