ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ, ಪ್ರಗತಿಬಂಧು ಸ್ವಸಹಾಯ ಸಂಘಗಳು ಒಕ್ಕೂಟ ಸವಣೂರು ವಲಯ, ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿವೈದ್ಯ ಶ್ರೀ ವಾಸುದೇವ ಇಡ್ಯಾಡಿ ಸನ್ಮಾನ ಸಮಾರಂಭ ಕಾರ್ಯಕ್ರಮ ಅ.1ರಂದು ಪ್ರಸಾದ್ ನಿಲಯ ಇಡ್ಯಾಡಿ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಅಧ್ಯಕ್ಷ ಮಹೇಶ್ ಕೆ.ಸವಣೂರು ವಹಿಸಿದ್ದರು.
ನಾಟಿ ವೈದ್ಯರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಸುದೇವ ಇಡ್ಯಾಡಿ ಹಾಗೂ ಮಹಾಲಕ್ಷ್ಮಿ ಇಡ್ಯಾಡಿ ಇವರಿಗೆ ಸನ್ಮಾನಿಸಲಾಯಿತು. ಅಧಿಕಾರಿಗಳಾದ ಮೇದಪ್ಪ ಗೌಡ ನಾವೂರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಸನ್ಮಾನವನ್ನು ಸ್ವೀಕರಿಸಿದ ವಾಸುದೇವ ಇಡ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಹಲವು ಸಂಘ ಸಂಸ್ಥೆಗಳ ಮಾರ್ಗದರ್ಶಕರು, ಸಮಾಜಮುಖಿ ಕಾರ್ಯಮಾಡುತ್ತಿರುವ ಗಿರಿಶಂಕರ್ ಸುಲಾಯ ಇವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ರಾಕೇಶ್ ರೈ ಕೆಡೆಂಜಿ, ಸುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪುಣ್ಚಪ್ಪಾಡಿ ಸಮರ್ಥ ಜನ ಸೇವ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ್ ಸುಲಾಯ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕರಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ ಪೆರಿಯಡ್ಕ, ಪತ್ರಕರ್ತ ಉಮಾಪ್ರಸಾದ್ ರೈ ನಡುಬೈಲು, ಸವಣೂರು ಪೆರಿಯಡ್ಕ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತಡಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳನ್ನು ಶ್ರೀಧರ ಇಡ್ಯಾಡಿ, ಕುಲದೀಪ್ ಸವಣೂರು, ರಾಜೇಂದ್ರ ಪ್ರಸಾದ್ ಇಡ್ಯಾಡಿ, ಮೌಲ್ಯ ಪ್ರಸಾದ್ ಇಡ್ಯಾಡಿ, ತೀರ್ಥ, ಅಭಿಷೇಕ್ ಗೌರವಿಸಿದರು. ವೀಣಾ ಕೆ. ಸ್ವಾಗತಿಸಿ, ಆನಂದ ಇಡ್ಯಾಡಿ ಪ್ರಾರ್ಥಿಸಿದರು, ಪ್ರೇಮ ಆರೆಲ್ತಾಡಿ ಸನ್ಮಾನ ಪತ್ರ ಓದಿದದರು, ಮೀನಾಕ್ಷಿ ಸವಣೂರು ಧನ್ಯವಾದಗೈದರು, ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.