ಪುತ್ತೂರು ಶಿಕ್ಷಕರ ಸಹಕಾರ ಸಂಘದಿಂದ “ಆರ್.ಡಿ ಮಾಡಿ, ಚಿನ್ನ ಗೆಲ್ಲಿ” ಲಕ್ಕಿ ಡ್ರಾ

0

ಪುತ್ತೂರು:ಎಪಿಎಂಸಿ ರಸ್ತೆಯ ಡಾಯಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಕರ ಸಹಕಾರ ಸಂಘ ನಿಯಮಿತ ಪುತ್ತೂರು ತಾಲೂಕು ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಸಂದರ್ಭ ಹಮ್ಮಿಕೊಂಡ “ಆರ್.ಡಿ ಮಾಡಿ ಚಿನ್ನ ಗೆಲ್ಲಿ” ಯೋಜನೆಯ ಲಕ್ಕಿ ಡ್ರಾವು ಸೆ.30 ರಂದು ಸಂಘದ ಪ್ರಧಾನ ಕಚೇರಿಯಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಲಕ್ಕಿ ಡ್ರಾ ಕಾರ್ಯಕ್ರಮವನ್ನು ನೆರವೇರಿಸಿ ಪುತ್ತೂರು ತಾಲೂಕಿನಲ್ಲಿ ಹೊಸದಾಗಿ ಪ್ರಾರಂಭಗೊಂಡ ಶಿಕ್ಷಕರ ಸಹಕಾರ ಸಂಘ ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಮುಂದೆಯೂ ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಹಾಗೂ ಶಿಕ್ಷಕರಿಗೆ ಇದರ ಸದುಪಯೋಗ ದೊರೆಯಲಿ ಎಂದು ಹೇಳಿ ಶುಭ ಹಾರೈಸಿದರು. 

ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕರವರು ಮಾತನಾಡಿ, ಪ್ರಸ್ತುತ ಶಿಕ್ಷಕರ ಸಹಕಾರ ಸಂಘ ಉತ್ತಮ ಬೆಳವಣಿಗೆಗೆ ನಿವೃತ್ತ ಶಿಕ್ಷಕರ ಸಹಕಾರವನ್ನು ನೀಡುವ ಭರವಸೆಯೊಂದಿಗೆ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಸುಳ್ಯ ದಸರಾ ಕ್ರೀಡಾಕೂಟದ ನೋಡಲ್ ಅಧಿಕಾರಿ ದೇವರಾಜ ಮುತ್ಲಾಜೆ ಉಪಸ್ಥಿತರಿದ್ದರು.

ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ. ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿರ್ದೇಶಕರಾದ ಬಾಬು ಸರ್ ವಂದಿಸಿದರು. ಉಪಾಧ್ಯಕ್ಷ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್ , ನಿರ್ದೇಶಕ ರಾಜಶೇಖರ, ಗಿರೀಶ, ಮೋನಪ್ಪ ಎಂ, ಬಶೀರ್, ಶ್ರೀಕಾಂತ್, ಸ್ಮಿತಾಶ್ರೀ ಬಿ, ರತ್ನಕುಮಾರಿ, ಸುನಿಲಾ, ಸುಮತಿ, ಮೋಲಿ ಪಿಂಟೊ, ಕಾರ್ಯನಿರ್ವಣಾಧಿಕಾರಿ ಲಿಜೊ ಜೇಕಬ್, ಕಚೇರಿ ಸಿಬ್ಬಂದಿ ಶ್ವೇತಾ ಉಪಸ್ಥಿತರಿದ್ದರು.

ಫಲಿತಾಂಶ.
ಪಾಪೆಮಜಲು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮೇಬಲ್ ಡಿ’ಸೋಜರವರು ಲಕ್ಕಿ ಡ್ರಾದಲ್ಲಿ ಚಿನ್ನದ ನಾಣ್ಯ ವಿಜೇತರಾದರು. ಇತರ ಐದು ಆಕರ್ಷಕ ಬಹುಮಾನಗಳನ್ನು ಸೋಮಾವತಿ(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಿಕಳ), ದಿವ್ಯಜೋತಿ(ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುರಿಯ), ಪಾರ್ವತಿ( ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಬಕ), ಪ್ರವಿತ( ಸರಕಾರಿ ಪ್ರೌಢಶಾಲೆ ಕಾಡುಮಠ), ಆಶಾಲತಾ (ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೇನಾಲ) ಇವರುಗಳು  ಪಡೆದರು. 


ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ದಿನ ಶಿಕ್ಷಕರ ಸಹಕಾರ ಸಂಘ ಪುತ್ತೂರು ತಾಲೂಕು ಹಮ್ಮಿಕೊಂಡ ಸಹಕಾರ ಸಂಘದ ಸದಸ್ಯತ್ವ ಅಭಿಯಾನ, ಹಾಗೂ ಆರ್ ಡಿ ಮಾಡಿ ಚಿನ್ನದ ನಾಣ್ಯ ಗೆಲ್ಲಿ ಈ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಮಾಯಿದೆ ದೇವುಸ್ ಚರ್ಚ್ ಧರ್ಮ ಗುರುಗಳು ,ನಗರ ಸಭೆಯ ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರು, ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರು, ಇಲಾಖೆಯ ವಿವಿಧ ಸ್ತರಗಳ ಅಧಿಕಾರಿಗಳು, ನಿವೃತ್ತ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ವಿದ್ಯಾಭಿಮಾನಿಗಳು, ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here