ಅಕ್ಷರ ಯಜ್ಞ ಸೇವೆಗಾಗಿ ಭಕ್ತಾದಿಗಳಿಗೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಅ.3ರಂದು ಆರಂಭಗೊಂಡಿತು. ಅಕ್ಷರ ಯಜ್ಞ ಸೇವೆಗಾಗಿ ನೀಡಲಾಗುವ ಪುಸ್ತಕದ ಕುರಿತು ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈಯವರು ಪುಸ್ತಕದ ಪ್ರಾಯೋಜಕತ್ವ ವಹಿಸಿದ್ದರು. ಭಾಗ್ಯೇಶ್ ರೈಯವರ ಪುತ್ರಿ ದೇವಿದ್ಯಾ ಮಕ್ಕಳಿಗೆ ಪುಸ್ತಕ ನೀಡುವ ಮೂಲಕ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಪುಸ್ತಕದಲ್ಲಿ ಮಕ್ಕಳಿಂದ “ಶ್ರೀ ಶಾರದಾಂಬಾಯೈ ನಮಃ” ಎಂದು 108 ಬಾರಿ ಬರೆದು ಅ.8ರ ಶಾರದಾ ದೇವಿಯ ಪ್ರತಿಷ್ಠೆಯಂದು ಶ್ರೀದೇವಿಗೆ ಸಮರ್ಪಿಸಿ ಸರಸ್ವತೀ ಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುವುದು.

ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್., ಉಪಾಧ್ಯಕ್ಷ ಯಶವಂತ ಆಚಾರ್ಯ, ರಾಜೇಶ್ ಬನ್ನೂರು, ಯೋಗಾನಂದ ರಾವ್, ಪುಷ್ಪರಾಜ್ ಉರ್ಲಾಂಡಿ, ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here