ಗೆಜ್ಜೆಗಿರಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಬೆಳಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರ ಆಪ್ತ ಸಹಾಯಕ  ಜಗನ್ನಾಥ್ ಬಂಗೇರ ಮುಗ್ಗಗುತ್ತು  ಹೇಳಿದರು.

ಅವರು  ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ 9 ದಿವಸಗಳ ಕಾಲ ನಡೆಯುವ  ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಯಾವುದೇ  ಧಾರ್ಮಿಕ ಅಥವಾ ಸಾಮಾಜಿಕ ಕ್ಷೇತ್ರದ ವೇದಿಕೆಯಲ್ಲಿ ಮಾತನಾಡುವಷ್ಟು ಸುಲಭ .ಆದರೆ ಅದನ್ನು ಮುನ್ನಡೆಸುವುದು ಕಷ್ಟ ಒಂದು ಧಾರ್ಮಿಕ ಕ್ಷೇತ್ರ ನಡೆಸಲು ಬಲುಕಷ್ಟ. ಈ  ನಿಟ್ಟಿನಲ್ಲಿ  ಶ್ರೀ ಕ್ಷೇತ್ರ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಮತ್ತು ಉತ್ತಮ ಆಡಳಿತ ಮಂಡಳಿ ವ್ಯವಸ್ಥೆಯಿಂದ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ವ್ಯಕ್ತಪಡಿಸಿದರು.

ಅವರು  ಶ್ರೀ ಕ್ಷೇತ್ರ ಇಂದು ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಬೆಳಗುತ್ತಿದೆ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಎಲ್ಲರನ್ನೂ ಶ್ರೀ ದೇಯಿಬೈದೈತಿ  ಕೋಟಿ ಚೆನ್ನಯರು ಆರೋಗ್ಯ ನೀಡಿ  ಕ್ಷೇತ್ರ ಬೆಳಗಲು ಆಶೀರ್ವದಿಸಲಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮವು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ  ಪೀತಾಂಬರ ಹೆರಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಆರಂಭದಲ್ಲಿ  ಗಣಪತಿ ಹವನ ನೆರವೇರಿಸಲಾಯಿತು. ಬಳಿಕ ತೆನೆ ಕಟ್ಟುವ ಮೂಲಕ ಸಂಭ್ರಮಾಚರಣೆ ನಡೆಯಿತು.ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ,  ಮಹಾ ಮಾತೆ ದೇಯಿ ಬೈದೆತಿಗೆ ವಿಶೇಷ  ಪುಷ್ಪಲಂಕಾರ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಭಜನಾ ಕಾರ್ಯಕ್ರಮ;- 
ಪಡುಮಲೆ ಸರ್ವಶಕ್ತಿ ಮಹಿಳಾ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.  

ಕಾರ್ಯಕ್ರಮದಲ್ಲಿ ,ಸಮಿತಿ ಗೌರವ ಅಧ್ಯಕ್ಷ ಜಯಂತ ನಡುಬೈಲ್,  ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ,  ಮೂಕ್ತೇಸರ   ಶ್ರೀಧರ ಪೂಜಾರಿ  ,ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ  ದೀಪಕ್ ಕೋಟ್ಯಾನ್,  ಮಾಧ್ಯಮ ವಕ್ತಾರ, ರಾಜೇಂದ್ರ ಚಿಲಿಂಬಿ ,ಜಯರಾಮ್ ಬಂಗೇರ ಕಿನ್ನಿಮಜಲ್,  ಸಂತೋಷ್  ಕುಮಾರ್ ಬೈರಂಪಳ್ಳಿ, ನಾಗೇಶ್ ಬೈಕಂಪಾಡಿ, ಶಂಕರಿ ಪಟ್ಟೆ ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here