ಸುದಾನ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ

0

puttur: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಿಕ್ಷಕ – ರಕ್ಷಕ ಸಂಘದ ಸಭೆಗಳನ್ನು ವಿವಿಧ ತಂಡಗಳಲ್ಲಿ ನಡೆಸಲಾಯಿತು.

ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ನಿವೃತ್ತ ಮುಖ್ಯ ಶಿಕ್ಷಕ ಮನೋಹರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಪೋಷಕರು ಮಕ್ಕಳ ಜೊತೆ ಆತ್ಮೀಯವಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವುದಕ್ಕೆ ಶಿಕ್ಷಕರೊಂದಿಗೆ ಕೈಗೂಡಿಸಬೇಕು ಎಂದರು.

ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ವಿನಿತಾ ಶೆಟ್ಟಿ ಮಾತನಾಡಿ ಹೆತ್ತವರು ತಮ್ಮ ಹೊಣೆಯಿಂದ ಹಿಂದೆ ಸರಿಯಬಾರದು. ಹೊರಗಿನ ವಾತಾವರಣದ ಕೆಟ್ಟ ಪ್ರಭಾವಕ್ಕೆ ಮಕ್ಕಳು ಒಳಗಾಗದಂತೆ ಕಾಪಾಡಿಕೊಳ್ಳಬೇಕು. ಮಕ್ಕಳ ಮೇಲೆ ನಂಬಿಕೆ ಇರಬೇಕು ಆದರೆ ಕುರುಡು ನಂಬಿಕೆಯಾಗಬಾರದು. ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ರವರು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಬಗೆಗೆ ಮಾಹಿತಿ ನೀಡಿದರು.


ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೆ. ವಿಜಯ ಹಾರ್ವಿನ್ ರವರು ಮೌಲ್ಯಭರಿತ ಶಿಕ್ಷಣದೊಳಗೆ ಹೊಂದಿಸಿಕೊಳ್ಳುವ ಬಗ್ಗೆ ವಿವರಿಸಿದರು. ಕಾರ‍್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ , ಶಿಸ್ತಿನ ಚೌಕಟ್ಟಿನಲ್ಲಿ ಶಿಕ್ಷಣದ ಪೂರೈಸುವಿಕೆ, ಭವಿಷ್ಯ ರೂಪಿಸುವಿಕೆಯಲ್ಲಿ ಜಾಗೃತ ಮನಸ್ಸುಗಳನ್ನು ಬೆಳೆಸುವುದರ ಬಗ್ಗೆ 10ನೇ ತರಗತಿ ಪೋಷಕರಿಗೆ ವಿವರಿಸಿದರು.

ಶಾಲಾ ಕೋಶಾಧಿಕಾರಿ ಆಸ್ಕರ್ ಆನಂದ್ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯ ಸುಶಾಂತ್ ಹಾರ್ವಿನ್ , ಶಾಲಾ ನಿಲಯ ಪಾಲಕ ಸೌಮ್ಯ ಮಥಾಯಿಸ್, ಕುಶಾಲಪ್ಪ ಗೌಡ, ಸುಂದರ್ ನಾವೂರ್, ನವೀನ್, ಹಾಗೂ ಶಿಕ್ಷಕ ಸಂಯೋಜಕರೂ, ಪೋಷಕರು, ಕೆಲವು ಶಿಕ್ಷಕರು ವಿವಿಧ ಸಭೆಗಳನ್ನು ನಡೆಸಿಕೊಟ್ಟರು. ತರಗತಿವಾರು ಶಿಕ್ಷಕರು, ಹತ್ತನೆಯ ಹಾಗೂ ಹಾಸ್ಟೆಲ್‌ನ ವಿದ್ಯಾರ್ಥಿಗಳು ಸಭೆಗಳಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here