ಪುತ್ತೂರು:ಇಲ್ಲಿನ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಅ.3 ರಂದು ಫ್ಯಾಟಿ ಲಿವರ್(ಲಿವರ್ ನ ಕೊಬ್ಬು) ಇರುವವರಿಗೆ ವಿಶೇಷ ಫೈಬ್ರೋಸ್ಕ್ಯಾನ್ ತಪಾಸಣೆ ನಡೆಯಿತು.
ಈ ಪರೀಕ್ಷೆಯು ಉಚಿತವಾಗಿದ್ದು ಆಸ್ಪತ್ರೆ ವೈದ್ಯ ಡಾ.ಜೆ.ಸಿ ಅಡಿಗರವರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಸದಸ್ಯರಾದ ಪರಮೇಶ್ವರ ಗೌಡ, ಶ್ರೀಧರ್ ಆಚಾರ್ಯ, ಆಸ್ಪತ್ರೆ ಮ್ಯಾನೇಜರ್ ನೋಯೆಲ್ ಡಿ’ಸೋಜರವರು ಉಪಸ್ಥಿತರಿದ್ದರು. ಶಿಬಿರದಲ್ಲಿ 30 ಮಂದಿ ಫಲಾನುಭವಿಗಳು ಭಾಗವಹಿಸಿದ್ದರು.