ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾ.ಮಟ್ಟದ ಪದಾಧಿಕಾರಿಗಳ ಸಮಾವೇಶ

0

ಸೇವೆಯ ಮೂಲಕ ಸಮಾಜದ ಪರಿವರ್ತನೆಯೇ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ- ದುಗ್ಗೇ ಗೌಡ

ಪುತ್ತೂರು: ಸೇವೆ ನೀಡುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನ ವತಿಯಿಂದ ಅ.5ರಂದು ತೆಂಕಿಲ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸೇವೆಯಿಂದ ಪರಿವರ್ತನೆ ಸಾಧ್ಯ ಎಂಬುದನ್ನು ನೆಲ್ಯಾಡಿ ಬೀಡಿನಲ್ಲಿ ಎಂಟು ನೂರು ವರ್ಷಗಳ ಸೇವೆ ಮುನ್ನುಡಿ ಬರೆಯಲಾಗಿತ್ತು. ಅಂದು ಅಲ್ಲಿ ನೀಡಿದ ಸೇವೆಯಿಂದ ಬಹಳಷ್ಟು ಪರಿವರ್ತನೆ ಅಗಿತ್ತು. ಧರ್ಮಸ್ಥಳ ಕ್ಷೇತ್ರವು ಪ್ರಪಂಚಕ್ಕೆ ಧರ್ಮದ ಸಂದೇಶ ಸಾರಿದ ಕ್ಷೇತ್ರ. ಸರ್ವ ರೀತಿಯ ಬೆಳಗುವ ಕ್ಷೇತ್ರವಾಗಿದೆ. ವ್ಯಕ್ತಿಯಿಂದ ನೀಡುವ ಸೇವೆಯು ಶಕ್ತಿಯ ರೂಪದಲ್ಲಿದೆ. ಯೋಜನೆಯ ಮೂಲಕ ಎಲ್ಲರೂ ವ್ಯಕ್ತಿಯ ರೂಪದಲ್ಲಿ ಸೇವೆ ನೀಡುತ್ತಿದ್ದು ಜನರಿಗೆ ಮುಟ್ಟಿಸುವ ಕೆಲಸ ಆಗುತ್ತದೆ. ಯೋಜನೆಯಲ್ಲಿ ಅಧ್ಯಕ್ಷ, ಪದಾಧಿಕಾರಿಗಳು ಆಯ್ಕೆ ಕ್ಷೇತ್ರದ ಸಂಕಲ್ಪದಂತೆ ಆಗುತ್ತಿದೆ ಎಂದರು.


ಮುಖ್ಯ ಅತಿಥಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪುತ್ತೂರಿಗೆ ಬರುವಾಗ ಬಹಳಷ್ಟು ಪ್ರಶ್ನೆಗಳು ಜನರಲ್ಲಿತ್ತು. ಯೋಜನೆ ಬಂದ ಬಳಿಕ ಫೈನಾನ್ಸ್‌ಗಳ ಅಧಿಕ ಬಡ್ಡಿ ವ್ಯವಹಾರಗಳು ನಿಂತಿದೆ. ಕೃಷಿ ಅಭಿವೃದ್ಧಿಗೆ ಪ್ರೇರಣೆಯಾಗಿದೆ. ಹಸಿರು ಕ್ರಾಂತಿಯಾಗಿದೆ. ಸಮಾಜಕ್ಕೂ ಉತ್ತಮ ಕೊಡುಗೆ ನೀಡಿದೆ. ಯೋಜನೆಯಲ್ಲಿ ಉಳಿಕೆಯಾದ ಹಣ ಸಮಾಜದ ಅಭಿವೃದ್ಧಿ ಬಳಕೆಯಾಗುತ್ತಿದೆ. ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಯೋಜನೆಯ ಪಾತ್ರ ಪ್ರಮುಖವಿದೆ. ಹುಟ್ಟಿನಿಂದ ಸಾವಿನ ತನಕ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ದೇಶದಲ್ಲಿ ಯಾರೂ ಮಾಡದ ಮೂಲಕ ಯೋಜನೆಯ ಮೂಲಕ ಬಡವರ ಕಣ್ಣಿರು ಒರೆಸುವ ಕೆಲಸವಾಗಿದೆ. ಶೌರ್ಯ ಮತ್ತು ವಿಪತ್ತು ನಿರ್ವಹಣಾ ತಂಡ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ನೀಡುತ್ತಿರುವುದಲ್ಲದೆ ಸ್ವಚ್ಚತೆಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದೆ ಎಂದರು.


ಖ್ಯಾತ ನಿರೂಪಕರು, ಉಡುಪಿ ಬಾರ್ಕೂರು ನವಾಕ್ಷರಿಯ ಎನ್.ಆರ್ ದಾಮೋದರ ಶರ್ಮ ವಿಶೇಷ ಉಪನ್ಯಾಸ ನೀಡಿದರು. ಎಸ್.ಬಿ.ಐ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕಿ ಭವಾನಿ, ಶಾಖಾ ವ್ಯವಸ್ಥಾಪಕ ಅನೂಪ್ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ಮಾಹಿತಿ ನೀಡಿದರು.


ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಅಧ್ಯಕ್ಷ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವ್ಯ ಹಾಗೂ ಪೂಜ ಪ್ರಾರ್ಥಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ ಎಂ. ಸ್ವಾಗತಿಸಿದರು. ಉಪ್ಪಿನಂಗಡಿ ವಲಯಾಧ್ಯಕ್ಷ ನಾರಾಯಣ, ಕುಂಬ್ರ ವಲಯಾಧ್ಯಕ್ಷ ಮಾಧವ ರೈ, ಬೆಟ್ಟಂಪಾಡಿ ವಲಯಾಧ್ಯಕ್ಷ ರಾಧಾಕೃಷ್ಣ ಪಾಟಾಳಿ, ಅರಿಯಡ್ಕ ವಲಯಾಧ್ಯಕ್ಷ ದಿನೇಶ್ ರೈ, ಪುತ್ತೂರು ವಲಯಾಧ್ಯಕ್ಷ ಬಾಲಕೃಷ್ಣ, ವೀರಮಂಗಲ ಒಕ್ಕೂಟದ ಅಧ್ಯಕ್ಷ ಉಮೇಶ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಮೇಲ್ವಿಚಾರಕರಾದ ಶಿವಪ್ಪ ಕಾರ್ಯಕ್ರಮ ನಿರೂಪಿಸಿ, ಸುನೀತಾ ವಂದಿಸಿದರು.

LEAVE A REPLY

Please enter your comment!
Please enter your name here