





ಪುತ್ತೂರು: ಶ್ರೀ ಕ್ಷೇತ್ರ ಕಾರಣಿಕ ಶ್ರೀ ಸತ್ಯ ದೇವತೆ ಪಾಷಾಣಮೂರ್ತಿ ದೈವಸ್ಥಾನ ಎಲಿಕಾದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅ.6ರಂದು ವಿಶೇಷ ಸೇವೆ ನಡೆಯಲಿದೆ. ಬೆಳಿಗ್ಗೆ ಶ್ರೀ ದೈವಗಳಿಗೆ ನವಕಲಶ, ತಂಬಿಲ ಸೇವೆ ಬಳಿಕ ಶ್ರೀ ಪಾಷಾಣಮೂರ್ತಿ ಸತ್ಯದೇವತೆ ಕಲ್ಲುರ್ಟಿ ದೈವಕ್ಕೆ ಅದ್ದೂರಿಯ ಮಾನೆಚ್ಚಿಲ್ ಸೇವೆ ನಡೆಯಲಿರುವುದು ಎಂದು ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















