ಬಜತ್ತೂರು: ಆಡು ಕಳವಿಗೆ ಯತ್ನ- ಇಬ್ಬರನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

0

ಉಪ್ಪಿನಂಗಡಿ: ಮೇಯಲು ಬಿಟ್ಟ ಆಡುಗಳ ಪೈಕಿ ಎರಡು ಆಡನ್ನು ಹಾಡಹಗಲೇ ಕಾರಿನೊಳಗೆ ಹಾಕಿ ಕದಿಯಲು ಯತ್ನಿಸಿದ ಕೃತ್ಯವನ್ನು ಸ್ಥಳೀಯರ ಸಕಾಲಿಕ ಕ್ರಮದಿಂದ ತಡೆದು ಆಡು ಕಳ್ಳರನ್ನು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರದಂದು ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ನಡೆದಿದೆ.


ವಳಾಲು ಬೈಲಿನ ರಮೇಶ್ ಎಂಬವರ ಸಾಕಿದ ಆಡುಗಳನ್ನು ಹೆದ್ದಾರಿ ಬದಿಯ ಬೈಲಿನಲ್ಲಿ ಮೇಯಲು ಬಿಟ್ಟಿದ್ದು, ಈ ವೇಳೆ ಕಾರಿನಲ್ಲಿ ಬಂದ ತಂಡವೊಂದು ಎರಡು ಆಡುಗಳನ್ನು ಕದ್ದು ಕಾರಿನಲ್ಲಿ ಹಾಕಿದ್ದರು. ಈ ವೇಳೆ ಆಡು ಚೀರಾಡಿದ್ದು, ಇದನ್ನು ಕಂಡ ಬೈಕ್ ಸವಾರೊಬ್ಬರು ಸಂಶಯಗೊಂಡು ವಿಚಾರಿಸಿದಾಗ ಇದು ಆಡು ಕಳವು ಯತ್ನವೆಂದು ತಿಳಿದು ಸ್ಥಳೀಯರ ಸಹಕಾರ ಪಡೆದು ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರಿಗೊಪ್ಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here