ಚಂದಳಿಕೆ: ಆಟೋ ರಿಕ್ಷಾದಲ್ಲಿ ಹಾಲುಮಡ್ಡಿ ಸಾಗಾಟ-ನಾಲ್ವರ ಬಂಧನ

0

ಪುತ್ತೂರು:ರಕ್ಷಿತಾರಣ್ಯದಿಂದ ಹಾಲುಮಡ್ಡಿ ಮತ್ತು ಮೇಣ ಸಂಗ್ರಹಿಸಿ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಅರಣ್ಯ ಇಲಾಖೆಯವರು ಹಾಲು ಮಡ್ಡಿ, ಸಾಗಾಟಕ್ಕೆ ಬಳಸಿದ ಆಟೋರಿಕ್ಷಾ ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಅ.7ರಂದು ವಿಟ್ಲ ಸಮೀಪದ ಚಂದಳಿಕೆಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಕೆದಿಲ ನಿವಾಸಿಗಳಾದ ಆಲಿ ಹೈದರ್, ಉಮ್ಮರ್ ಫಾರೂಕ್, ಮಹಮ್ಮದ್ ಹಸೈನಾರ್ ಹಾಗೂ ಉಮ್ಮರ್ ಫಾರೂಕ್ ಬಂಧಿತ ಆರೋಪಿಗಳು. ಆರೋಪಿಗಳು ಉಕ್ಕುಡ ಸಮೀಪದ ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಂಗ್ರಹಿಸಿ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ವಿಟ್ಲ ಸಮೀಪದ ಚಂದಳಿಕೆ ಎಂಬಲ್ಲಿ ಆಟೋ ರಿಕ್ಷಾವನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ 11 ಕೆ.ಜಿ ಹಾಲುಮಡ್ಡಿ, ಮೇಣ ತೆಗೆಯಲು ಬಳಸಿದ ಸಲಕರಣೆಗಳು ಪತ್ತೆಯಾಗಿತ್ತು. ರಿಕ್ಷಾದಲ್ಲಿ ಹಾಲುಮಡ್ಡಿ ಮೇಣ ತೆಗೆಯಲು ಬಳಸಿದ ಉಪಕರಣಗಳು ಹಾಗೂ ಸಾಗಾಟಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ರಿಕ್ಷಾದಲ್ಲಿ 4 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿಗಳಾದ ವೀರಣ್ಣ, ಪ್ರಕಾಶ್ ಬಿ.ಟಿ., ಗಿರೀಶ್ ಎಚ್.ಪಿ., ಗಸ್ತು ಅರಣ್ಯ ಪಾಲ ಸತೀಶ್ ಡಿ’ಸೋಜ, ಚಾಲಕರಾದ ರಾಜೇಶ್, ತೇಜಪ್ರಕಾಶ್ ಹಾಗೂ ಸಿಬಂದಿ ವಿನೋದ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here