ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅ.7ರಂದು ಸಂಜೆ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರವೀಂದ್ರ, ರೇಖಾ ರೈ,ಯಕ್ಷಕೂಟ ಪುತ್ತೂರು ಇದರ ರಮೇಶ್ ಭಟ್, ರಾಮಪ್ರಸಾದ್, ರಾಮ ಜೋಯಿಸ್, ರಾಧಾಕೃಷ್ಣ ಕಲ್ಚಾರ್, ನಾ. ಕಾರಂತ ಪೆರಾಜೆ, ಭಾಸ್ಕರ್ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು ಉಪಸ್ಥಿತರಿದ್ದರು.
ಸಂಜೆ ಶಿವಸ್ವರ ಸುಗಮ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಕ್ತಿ-ಭಾವ-ಗಾನ ‘ಸಂಗೀತ ಸಂಭ್ರಮ’, ಯಕ್ಷಕೂಟ ಪುತ್ತೂರು ಇವರಿಂದ ‘ಶ್ರೀಕೃಷ್ಣ ಪಾರಿಜಾತ’ ಯಕ್ಷಗಾನ ತಾಳಮದ್ದಳೆ, ನಡೆಯಿತು. ಭಾಗವತರಾಗಿ ರಮೇಶ್ ಭಟ್ ಪುತ್ತೂರು, ಚೆಂಡೆ ಮೃದಂಗದಲ್ಲಿ ಪಿ.ಜಿ. ಜಗನ್ನಿವಾಸ ರಾವ್, ರಾಮಪ್ರಸಾದ್ ವದ್ವ, ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ನಾ. ಕಾರಂತ ಪೆರಾಜೆ, ರಾಮ ಜೋಯಿಸ್ ಬೆಳ್ಳಾರೆ, ರಮಾನಂದ ನೆಲ್ಲಿತಾಯ, ಭಾಸ್ಕರ ಶೆಟ್ಟಿ ಸಹಕರಿಸಿದರು.