ಪುತ್ತೂರು: ಬನ್ನೂರು ಕರ್ಮಲದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ನವರಾತ್ರಿ ಉತ್ಸವವು ಅ.3 ಗುರುವಾರದಿಂದ ಅ.11 ಶುಕ್ರವಾರದವರೆಗೆ ನಡೆಯಿತು. ಅ.3ರಂದು ಬೆಳಿಗ್ಗೆ ಶ್ರೀ ದೇವರ ಗದ್ದಿಗೆ ಏರುವುದು, ಅ.7ರಂದು ಸಂಜೆ ಮೂಡಾಯೂರು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಅ.11ರಂದು ಬೆಳಿಗ್ಗೆ ಕೊಪ್ಪರಿಗೆ ಏರುವುದು, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಶ್ರೀ ದರ್ಶನ ಪಾತ್ರಿಯವರಿಂದ ಶ್ರೀ ದೇವಿ ದರ್ಶನ ಮತ್ತು ಅಭಯ ನುಡಿ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತೀ ದಿನ ರಾತ್ರಿ ಭಜನಾ ಕಾರ್ಯಕ್ರಮ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಮುಂಬೈ ಉದ್ಯಮಿ ಚಂದ್ರಹಾಸ ಎಂ ರೈ, ಅಧ್ಯಕ್ಷ ಯು ಲೋಕೇಶ ಹೆಗ್ಡೆ, ಸಂಚಾಲಕ ಕೆ ರಾಜಣ್ಣ (ಧರ್ಮದರ್ಶಿ), ಉಪಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನಕರ ಗೌಡ ಬುಡ್ಲೆಗುತ್ತು, ಕೋಶಾಧಿಕಾರಿ ದಿನೇಶ್ ಕರ್ಮಲ, ಉತ್ಸವ ಸಮಿತಿಯ ಅಧ್ಯಕ್ಷ ಕೆ ಚಂದ್ರಶೇಖರ ಬನ್ನೂರು ಕರ್ಮಲ, ಉಪಾಧ್ಯಕ್ಷ ಮಹಾಲಿಂಗ ಪಾಟಾಳಿ, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಕರ್ಮಲ, ಜೊತೆ ಕಾರ್ಯದರ್ಶಿ ತಾರನಾಥ ಬನ್ನೂರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು, ಉತ್ಸವ ಸಮಿತಿಯ ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.