ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವ – ಸಾಂಸ್ಕೃತಿಕ ಸಂಭ್ರಮದಲ್ಲಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ‘ನಾಗಮಾಣಿಕ್ಯ’ ತುಳು ನಾಟಕ ರಂಗಾರ್ಪಣೆ

0

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯೀ ಸಭಾಂಗಣದಲ್ಲಿ ಅ.9ರಂದು ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ತುಳು ಚಾರಿತ್ರಿಕ ನಾಟಕ ‘ನಾಗಮಾಣಿಕ್ಯ’ ರಂಗಾರ್ಪಣೆಗೊಂಡಿತು.


ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ರಂಗಾರ್ಪಣೆ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್‌ ನೆಕ್ಕಿಲಾಡಿ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಹಿರಿಯ ಮೊಕ್ತೇಸರ ಯು.ಜಿ.ರಾಧ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ನವರಾತ್ರಿ ಉತ್ಸವ ಸಮಿತಿಯ ಸಂಚಾಲಕ ಜಗನ್ನಾಥ ಶೆಟ್ಟಿ ನಡುಮನೆ, ಉದ್ಯಮಿ ಗುಣಕರ ಅಗ್ನಾಡಿ, ನಾಟಕದ ರಚನೆಗಾರ ತುಳುನಾಡ ಕಲಾತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲ, ಕಾರ್ತಿಕ್ ಶಾಸ್ತ್ರಿ ಮಣಿಲ ಮತ್ತು ತಂಡದ ಸಂಚಾಲಕ ಕಿಶೋರ್ ಕುಮಾರ್ ಜೋಗಿರವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ನಾಟಕವನ್ನು ರಂಗಾರ್ಪಣೆಗೊಳಿಸಲಾಯಿತು.


ಬಳಿಕ ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ನಾಗ ಮಾಣಿಕ್ಯ ಚಾರಿತ್ರಿಕ ತುಳು ನಾಟಕ ಪ್ರದರ್ಶನಗೊಂಡಿತು. ವಿನೂತನ ಶೈಲಿಯ ರಂಗ ವಿನ್ಯಾಸ ಸಹಿತ ಅನೇಕ ವಿಶೇಷತೆಗಳ ಜೊತೆಗೆ ಸಂಪೂರ್ಣ ಧ್ವನಿ ಮುದ್ರಿತ ನಾಟಕ ಕಲಾಭಿಮಾನಿಗಳನ್ನು ಆಕರ್ಷಿಸಿತು. ಪುತ್ತೂರು, ಸುಳ್ಯ, ಬಂಟ್ವಾಳ ಮೊದಲಾದ ತಾಲೂಕಿನಲ್ಲಿ ಪ್ರಥಮ ಬಾರಿಗೆ ತುಳು ರಂಗಭೂಮಿಯಲ್ಲಿ ಅದ್ದೂರಿ ರಂಗ ವಿನ್ಯಾಸದೊಂದಿಗೆ ಮೂಡಿ ಬಂದ ನಾಗದೇವತೆಯ ಕಥಾವಸ್ತುವಿನ ನಾಟಕ ಕಿಕ್ಕಿರಿದು ಸೇರಿದ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ತುಳುನಾಡ ಕಲಾ ತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲರವರು ರಚಿಸಿ ನಿರ್ದೇಶಿಸಿ ಅಭಿನಯಿಸಿರುವ ನಾಟಕಕ್ಕೆ ಕಾರ್ತಿಕ್ ಶಾಸ್ತ್ರಿ ಮಣಿಲರವರು ಸಂಗೀತ ಸಂಯೋಜನೆ ಮಾಡಿದ್ದು, ರಾಜೇಶ್ ಶಾಂತಿನಗರ ಸಂಪೂರ್ಣ ಸಲಹೆ ಸಹಕಾರ ನೀಡಿದ್ದಾರೆ. ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ ರಿತು ಸೌಂಡ್ಸ್ ಮತ್ತು ರಿತು ಸೌಂಡ್ಸ್‌ನ ಕೃಷ್ಣ ಮುದ್ಯ ಮತ್ತು ಸಿದ್ದು ಬೆದ್ರರವರ ಕೈ ಚಳಕದಲ್ಲಿ ಮೂಡಿಬಂದಿದ್ದು ಪ್ರದೀಪ್ ಕಾವು ಮತ್ತು ನವ್ಯಾ ರಾಜ್ ಕಲ್ಲಡ್ಕರವರ ಉತ್ತಮ ರೀತಿಯ ಮುಖವರ್ಣಿಕೆಯೊಂದಿಗೆ ಯಶಸ್ವಿ ಪ್ರದರ್ಶನವಾಗಿ ಮೂಡಿ ಬಂತು. ತಂಡದ ಕಲಾವಿದ ಬಿ. ರಂಗಯ್ಯ ಬಲ್ಲಾಳ್ ರಂಗಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್ ಆರ್. ಪುತ್ತೂರು, ಅನೀಶ್ ಉಬಾರ್ ಮತ್ತು ಲಿತಿನ್ ಶಾಂತಿನಗರರವರ ಅಮೋಘ ಅಭಿನಯ ನಾಟಕದ ಯಶಸ್ಸಿಗೆ ಕಾರಣವಾಯಿತು. ನಾಟಕದ ತಾಂತ್ರಿಕ ವರ್ಗದಲ್ಲಿ ಭರತ್ ಕುಮಾರ್ ಶಾಂತಿನಗರ, ನವೀನ್ ಶಾಂತಿನಗರ ಮತ್ತು ಹರ್ಷ ಶಾಂತಿನಗರ ಸಹಕರಿಸಿದರು.

LEAVE A REPLY

Please enter your comment!
Please enter your name here