ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್‌ನಲ್ಲಿ ದಸರಾ ಸಂಭ್ರಮ – ವಿವೋ ಸ್ಮಾರ್ಟ್ ಫೋನ್ ಮೇಳ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

0

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿರುವ ಗ್ರಾಮೀಣ ಭಾಗದ ವಿಶ್ವಾಸನೀಯ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಶೋರೂಮ್ ಅತಿಥಿಯಲ್ಲಿ ದಸರಾ ಸಂಭ್ರಮದ ಬಿಗ್ ಆಫರ್ ನಡೆಯುತ್ತಿದ್ದು ಇದರ ಸಲುವಾಗಿ ಅ.11ರಂದು ವಿವೋ ಸ್ಮಾರ್ಟ್‌ಫೋನ್ ಮೇಳ ಅದ್ಧೂರಿಯಾಗಿ ನಡೆಯಿತು.

ಬೆಳಿಗ್ಗೆಯಿಂದ ರಾತ್ರಿ ತನಕ ನಡೆದ ವಿವೋ ಸ್ಮಾರ್ಟ್‌ಫೋನ್ ಮೇಳದಲ್ಲಿ ನೂರಾರು ಮಂದಿ ಗ್ರಾಹಕರು ಭಾಗವಹಿಸಿ ಸಂಭ್ರಮಪಟ್ಟರು. ಮುಖ್ಯವಾಗಿ ಮನರಂಜನೆಯ ಜೊತೆಯಲ್ಲೇ ಆಕರ್ಷಕ ಗಿಪ್ಟ್‌ಗಳನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಅತಿಥಿಗೆ ಬರುವ ಪ್ರತಿಯೊಬ್ಬ ಗ್ರಾಹಕರು ಕೂಡ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡು ಆಕರ್ಷಕ ಗಿಫ್ಟ್ ಗಳನ್ನು ತಮ್ಮದಾಗಿಸಿಕೊಂಡರು. ವಿಶೇಷವಾಗಿ ವಿವೋ ಕಂಪೆನಿಯ ಮೊಬೈಲ್‌ಗಳ ಮೇಲೆ ಭಾರೀ ರಿಯಾಯಿತಿ ಜೊತೆಯಲ್ಲೇ ಆಕರ್ಷಕ ಉಡುಗೊರೆಗಳನ್ನು ನೀಡಲಾಗಿತ್ತು. ಮೊಬೈಲ್‌ಗಳ ಮೇಲೆ 3 ಸಾವಿರದಿಂದ 5 ಸಾವಿರ ರೂ.ಗಳ ತನಕ ರಿಯಾಯಿತಿ ನೀಡಲಾಗಿತ್ತು.


ಮನರಂಜಿಸಿದ ವಿವೋ ಸ್ಮಾರ್ಟ್‌ಫೋನ್ ಮೇಳ
ಅತಿಥಿಯ ಸಹಯೋಗದೊಂದಿಗೆ ನಡೆದ ವಿವೋ ಸ್ಮಾರ್ಟ್‌ಫೋನ್ ಮೇಳ ಆಕರ್ಷನೀಯವಾಗಿತ್ತು. ಕೀರ್ತಿ ಮಂಗಳೂರುರವರ ಕಾರ್ಯಕ್ರಮ ನಿರೂಪಣೆಯಲ್ಲಿ ಗ್ರಾಹಕರಿಗೆ ಹಲವು ಚಟುವಟಿಕೆಗಳನ್ನು ಸ್ಥಳದಲ್ಲೇ ನೀಡಲಾಯಿತು. ಗ್ರಾಹಕರಿಗೆ ಕ್ವಿಝ್, ಫನ್ ಗೇಮ್ ಇತ್ಯಾದಿಗಳನ್ನು ನೀಡಲಾಯಿತು. ವಿಜೇತರಾದವರಿಗೆ ಅತಿಥಿಯಿಂದ ಆಕರ್ಷಕ ಗಿಪ್ಟ್‌ಗಳನ್ನು ನೀಡಲಾಯಿತು. ವಿವೋ ಕಂಪೆನಿಯ ರಂಜಿತ್, ಲೆಸನ್ ವೇಗಸ್,ದಿನೇಶ್, ಮಾಧವ್ ಹಾಗೂ ಸಚಿನ್ ಸಹಕರಿಸಿದ್ದರು.



ದಸರಾ ಬಿಗ್ ಸೇಲ್
ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನಲ್ಲಿ ಗ್ರಾಹಕರಿಗೆ ದಸರಾ ಬಿಗ್ ಆಫರ್ ಅನ್ನು ಅತಿಥಿ ಕಡೆಯಿಂದ ನೀಡಲಾಗಿದ್ದು, ಖರೀದಿಯ ಜೊತೆಗೆ ಆಕರ್ಷಕ ಗಿಫ್ಟ್, ಕ್ಯಾಶ್‌ಬ್ಯಾಕ್ ಉಡುಗೊರೆಗಳನ್ನು ಪಡೆಯಬಹುದಾಗಿದೆ. ಎಲ್ಲಾ ಮೊಬೈಲ್‌ಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಇದಲ್ಲದೆ ಇಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ, ಖಚಿತ ಉಡುಗೊರೆಗಳಿವೆ. ಬಜಾಜ್, ಟಿವಿಎಸ್ ಇತ್ಯಾದಿ ಫೈನಾನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯ ವ್ಯವಸ್ಥೆ ಇದೆ. ಫರ್ನಿಚರ‍್ಸ್‌ಗಳ ಮೇಲೆಯೂ ಭಾರೀ ರಿಯಾಯಿತಿ ಇದೆ. ಹಾಗಾದರೆ ತಡ ಯಾಕೆ ಇಂದೇ ಅತಿಥಿಗೆ ಭೇಟಿ ಕೊಟ್ಟು ನಿಮ್ಮಿಷ್ಟದ ಅತಿಥಿಯೊಂದಿಗೆ ಈ ವರ್ಷದ ದಸರಾವನ್ನು ಸಂಭ್ರಮಿಸಿಕೊಳ್ಳಿ….ಹೆಚ್ಚಿನ ಮಾಹಿತಿಗಾಗಿ 9481934111 ಗೆ ಸಂಪರ್ಕಿಬಹುದಾಗಿದೆ.

LEAVE A REPLY

Please enter your comment!
Please enter your name here