ರಾಮಕುಂಜ: ರಾಮಕುಂಜ ಗ್ರಾಮದ ದೊಡ್ಡ ಉರ್ಕ ನಿವಾಸಿ, ರಾಮಕುಂಜ ಗ್ರಾಮ ಸಹಾಯಕ ಲಿಂಗಪ್ಪ ಗೌಡ (58ವ.) ರವರು ಹೃದಯಾಘಾತದಿಂದ ಅ.13 ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಲಿಂಗಪ್ಪ ಗೌಡ ಅವರಿಗೆ ಐದು ದಿನದ ಹಿಂದೆ ಎದೆ ನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಬಂದಿದ್ದರು. ಅ.13 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಲಿಂಗಪ್ಪ ಗೌಡ ಅವರು 30 ಕ್ಕೂ ಹೆಚ್ಚು ವರ್ಷಗಳಿಂದ ರಾಮಕುಂಜ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.