ಬಡಗನ್ನೂರು: ತಾಯಿ ರಾಜರಾಜೇಶ್ವರಿ ಅನುಗ್ರಹ ಸಾನಿಧ್ಯ ಬೆಳಗುತ್ತದೆ ಎಂದು ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಹೇಳಿದರು. ಅವರು ಪಡುಮಲೆ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವರು ಕೂರ್ಮಾವತರ ತಾಳಿದ ಮದಕ ರಾಜರಾಜೇಶ್ವರಿ ಸಾನಿಧ್ಯದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವ 9ನೇ ದಿವಸದ ಕಾರ್ಯಕ್ರಮಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಮಾತನಾಡಿದರು.
ತಾಯಿ ಸಾನಿಧ್ಯಕ್ಕೆ ಬರುವಾಗಲೇ ಮನ ರೋಮಾಂಚಕವಾಗುತ್ದೆದೆ. ತಾಯಿ ಸಾನಿಧ್ಯದಲ್ಲಿ ಅವರ ಪ್ರೇರಣೆಯಲ್ಲಿ ಯಾವ ಕೆಲಸ ಅಗಬೇಕಾ ಅದು ಆಗುತ್ತದೆ. ನಾವು ನಿಮಿತ್ತ ಎಲ್ಲವೂ ತಾಯಿಯ ಪ್ರೇರಣೆ ನಾವು ಮಾಡುವ ಕೆಲಸ ಮಾಡುತ್ತಿರಬೇಕು.. ಸಮಿತಿ ಸಂಕಲ್ಲದಂತೆ ಯಾವ ಕೆಲಸ ಅಗಬೇಕು ಅದು ತಾಯಿ ರಾಜರಾಜೇಶ್ವರಿಯ ಅನುಗ್ರಹದಿಂದ ಮುಂದಿನ ವಿಜಯದಶಮಿ ಸಂದರ್ಭದಲ್ಲಿ ಆಗುತ್ತದೆ.ನಾನು ತಮ್ಮ ಪ್ರತಿನಿಧಿಯಾಗಿ ಪೂರ್ಣ ಸಹಕಾರ ನೀಡುವ ಭರವಸೆ ನೀಡುವುದಾಗಿ
ಮದಕ ರಾಜರಾಜೇಶ್ವರಿ ಸಾನಿಧ್ಯದಲ್ಲಿ 9 ನೇ ದಿವಸದ ಧಾರ್ಮಿಕ ಕಾರ್ಯಕ್ರಮವು ಭಜನಾ ಸಂಕೀರ್ತನೆ, ಸಹಸ್ರನಾಮ ಪಾರಾಯಣ ಹಾಗೂ ಹೂವಿನ ಪೂಜೆ ಯೊಂದಿಗೆ ವಿಜೃಂಭಣೆಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮವು ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಶ್ರೀ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ ಕಾರ್ಯದರ್ಶಿ ಗಂಗಾಧರ ರೈ ಮೇಗಿನಮನೆ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು ,ಪುತ್ತೂರು ಭಜನಾ ಪರಿಷತ್ತಿನ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಹಾಗೂ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.