ಪುತ್ತೂರು: ಬದ್ರಿಯಾ ಜುಮಾ ಮಸೀದಿ ಕೋಲ್ಪೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್ಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆ ಜಮಾಅತ್ ಅಧ್ಯಕ್ಷ ಶೇಖಬ್ಬ ಹಾಜಿ ಕೋಲ್ಪೆ ಅಧ್ಯಕ್ಷತೆಯಲ್ಲಿ ಕೋಲ್ಪೆ ಬದ್ರಿಯಾ ಮದ್ರಸದ ಸಭಾಂಗಣದಲ್ಲಿ ನಡೆಯಿತು. ಬಿ.ಜೆ.ಎಮ್ ಕೋಲ್ಪೆ ಇದರ ಖತೀಬ್ ನೌಶಾದ್ ಸಖಾಫಿ ವೀಕ್ಷಕರಾಗಿ ಆಗಮಿಸಿದ್ದರು.
ಯಂಗ್ಮೆನ್ಸ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಕೋಲ್ಪೆ ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಕೋಲ್ಪೆ, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ಕೋಲ್ಪೆ, ಕೋಶಾಧಿಕಾರಿಯಾಗಿ ಅಯ್ಯೂಬ್ ಕೋಲ್ಪೆ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ನಿಸಾರ್ ಇಬ್ರಾಹಿಂ, ಸಂಚಾಲಕರಾಗಿ ರಿಯಾಝ್ಕೋಲಪೆ ಕೋಲ್ಪೆ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಅಕ್ಕರೆ ಮತ್ತು ಸ್ಪೀಕರ್ ಆಗಿ ಲತೀಫ್ ದಲ್ಕಾಜೆ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಕುಂಞಿ ಕೋಲ್ಪೆ, ಬಶೀರ್ ಮೊಯಿದಿನಬ್ಬ, ಆಸೀಫ್ ಕೋಲ್ಪೆ, ಅಜಿನಾಸ್ ಕೋಲ್ಪೆ, ನೌಶಾದ್ ಕೋಲ್ಪೆ, ಬಾತಿಶ್ ಎಸ್ ಅವರನ್ನು ಆಯ್ಕೆ ಮಾಡಲಾಯಿತು.
ಅಲ್ ಮಕರ್ ಸುನ್ನಿಯ ವಿದ್ಯಾ ಸಂಸ್ಥೆಯಲ್ಲಿ ಕಲಿತು ‘ಅಮಾನಿ’ ಬಿರುದು ಪಡೆದ ರಿಜ್ವಾನ್ ಅಮಾನಿ ಮತ್ತು ಯಂಗ್ಮೆನ್ಸ್ ಗಲ್ಫ್ ಪ್ರತಿನಿಧಿಗಳಾದ ರಫೀಕ್ ಕುವೈತ್ ಹಾಗೂ ಬಶೀರ್ ಅಬುಧಾಬಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.