ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.’ ಫೈನಲ್ ಮೆರುಗು

0

ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನವರ ಬಹು ನಿರೀಕ್ಷಿತ ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.ನ ಫೈನಲ್ ಕಾರ್ಯಕ್ರಮ ಅ.13ರಂದು ಜಿ.ಎಲ್. ವನ್ ಮಾಲ್ ನಲ್ಲಿ ನಡೆಯಿತು. ಈ ಗೋಲ್ಡನ್ ಗರ್ಲ್ಸ್ ಆಯ್ಕೆಗಾಗಿ ಆಸಕ್ತ ಸ್ಥಳೀಯ ರೂಪದರ್ಶಿಗಳಿಂದ ಫೊಟೋಗಳನ್ನು ಆಹ್ವಾನಿಸಲಾಗಿತ್ತು. ಒಟ್ಟು ಒಂದು ಸಾವಿರದಷ್ಟು ಆಕಾಂಕ್ಷಿಗಳು ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್.’ ಆಗುವ ಕನಸಿನೊಂದಿಗೆ ತಮ್ಮ ಆಕರ್ಷಕ ಫೊಟೋಗಳನ್ನು ಕಳುಹಿಸಿದ್ದರು.ಇವರಲ್ಲಿ, ವಿವಿಧ ಮಾನದಂಡಗಳಿಗೆ ಅನುಸಾರವಾಗಿ ಅಂತಿಮ 20 ರೂಪದರ್ಶಿಗಳನ್ನು ಆಯ್ಕೆ ಮಾಡಲಾಯಿತು.

ಹೀಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳಲ್ಲಿ ‘ಬೆಸ್ಟ್ ಆಫ್ ತ್ರೀ’ ಆಯ್ಕೆ ಮಾಡುವ ಸಲುವಾಗಿ ಫೈನಲ್ ಆಯ್ಕೆಯ ರೌಂಡ್ ಜಿ.ಎಲ್. ವನ್ ಮಾಲ್ ನಲ್ಲಿ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ‘ಕಲರ್ ಫುಲ್’ ಆಗಿ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಅದಿತಿ ಎಂ.ಎಸ್. ಅವರು ‘ಐಗಿರಿ ನಂದಿನಿ..’ ನೃತ್ಯದ ಮೂಲಕ ಗಮನ ಸೆಳೆದರೆ, ಬಳಿಕ ನವ್ಯ ಅವರ ಗಣಪತಿ ಸ್ತುತಿ ಸುಶ್ರಾವ್ಯವಾಗಿ ಮೂಡಿಬಂತು. ನಂತರ ಡಿ ಝೋನ್ ಪುತ್ತೂರು ನೃತ್ಯ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನಗೊಂಡಿತು.

ಇದಾದ ಬಳಿಕ ಒಂದು ಸಾವಿರ ಆಕಾಂಕ್ಷಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಸೂಪರ್ ಕಲೆಕ್ಷನ್ ಗಳಾದ ಪ್ರಾಚೀ, ಪಾರ್ಥ, ಗ್ಲೋ, ಆಂಟಿಕ್, ಟೆಂಪಲ್ ಆಭರಣಗಳನ್ನು ಧರಿಸಿ ವೇದಿಕೆ ಮೇಲೆ Ramp walk ನಡೆಸಿದರು.

ಅಂತಿಮವಾಗಿ 20 ಜನ ರೂಪದರ್ಶಿಗಳಲ್ಲಿ ರೋಶನಿ ಗೌಡ, ಅನುಷಾ ಮ್ಯಾಥ್ಯೂ, ರಶ್ಮಿತಾ ರಾವ್ ಅವರು ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್. ಆಗಿ ಮೂಡಿಬರುವ ಮೂಲಕ ಈ ಸ್ಪರ್ಧಾ ಸರಣಿಯ ವಿಜೇತರಾಗಿ ಕಂಗೊಳಿಸಿದರು.

ಈ ಕಾರ್ಯಕ್ರಮದ ನಡುವೆ ನಿರೂಪಕರು ಕೇಳಿದ ಪ್ರಶ್ನೆಗಳಿಗೆ ಸ್ಥಳದಲ್ಲೇ ಸರಿ ಉತ್ತರ ನೀಡಿದ ಪ್ರೇಕ್ಷಕರಿಗೆ ಬಹುಮಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ ಆಚಾರ್ಯ, ವೇದ ಲಕ್ಷ್ಮೀಕಾಂತ ಆಚಾರ್ಯ, ಸುಧನ್ವ ಆಚಾರ್ಯ, ಮೇಘ ಶಂಕರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಅಂತಿಮ ಸುತ್ತಿಗೆ ಆಯ್ಕೆಗೊಂಡ 20 ಜನ ರೂಪದರ್ಶಿಗಳಿವರು…
ಮೇಘನಾಶ್ಯಾಮ್
ಡಾ. ಕೃತಿಕಾ ಕೆ.
ನಿವೇದಿತಾ ಜೈನ್
ಪ್ರತೀಕ್ಷಾ ಗೌಡ
ಮನೀಷಾ
ರೋಶನಿ ಶಿವಪ್ರಕಾಶ್ ಗೌಡ
ರಶ್ಮಿ ಎ.ಬಿ.
ಅಂಬಿಕಾ ನಾಯಕ್ ಎನ್.
ದಿಶಾ ಪೂಜಾರಿ
ಅನುಷಾ ಮ್ಯಾಥ್ಯೂ
ಶ್ರೇಯಾ ಸಾಲಿಯಾನ್
ಶಿವಾನಿ ಪ್ರಭು
ರಶ್ಮಿತಾ ರಾವ್
ಡಾ. ಅಭಿನಿತಾ ಎಂ.ಪಿ.
ಸಾಯಿ ಶ್ರೀಪದ್ಮಾ
ಆಶ್ರಿತಾ ಡಿ.ಎಸ್.
ಸುರಕ್ಷಾ
ನಿಶ್ಮಾ ಪೂಜಾರಿ
ಸ್ವಾತಿ ಗೌಡ

ಸುರೇಶ್‌ ಶೆಟ್ಟಿ ಇವೆಂಟ್‌ ಆಂಡ್‌ ಮ್ಯಾನೇಜ್ಮೆಂಟ್‌ ಆಯೋಜನೆಯಲ್ಲಿ ಮೂಡಿ ಬಂದ ಈ ಕಾರ್ಯಕ್ರಮವನ್ನು ಸೌಮ್ಯ ಕೋಟ್ಯಾನ್‌ ನಿರೂಪಿಸಿದರು.

LEAVE A REPLY

Please enter your comment!
Please enter your name here