ಪುತ್ತೂರು: ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ 55ನೇ ವರ್ಷದ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭವು ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಂಚಾಲಕರಾದ ವಸಂತ ಕೆ. ಸುವರ್ಣರವರು
ಧಾರ್ಮಿಕ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನವರಾತ್ರಿ ಪ್ರಯುಕ್ತ ನಡೆಸಲಾದ ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾನ್ವಿ ಜೆ.ಎಸ್, ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತೀಕ್ಷ ಅಡ್ಯಾಲು, ಅಂಕಿತಾ ಜೇಡರಕೋಡಿ ಹಾಗೂ ವಿದ್ಯಾಭಾರತಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ ಸಾಧಕ ವಿದ್ಯಾರ್ಥಿಗಳಾದ ವಂಶಿತ ನೆಕ್ಕರಾಜೆ, ಸಾನ್ವಿತಾ ನೆಕ್ಕರೆ, ಆದ್ಯಾ ಆಲದಗುಂಡಿ, ಕೃತಿ ಹೆಚ್. ಹೊಸಮನೆ, ಧನ್ಯ ಕೆ. ಕಲ್ಲಮಜಲು, ತೃಶಾ ಕರ್ಗಲ್ಲು, ಯಶಸ್ ಆಲದಗುಂಡಿ, ಮನ್ವಿತ್ ನೆಕ್ಕರೆ, ಹೃತೇಶ್ ಕರ್ಗಲ್ಲು ರವರನ್ನು ಗೌರವಿಸಲಾಯಿತು. ಶ್ರೀ ಮಹಾದೇವಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂಜಯ್ ದೇವಸ್ಯ, ಕಾರ್ಯದರ್ಶಿ ಸ್ನೇಹಿತ್ ನೀರಪಳಿಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವಾರ್ಪಣೆ ಕಾರ್ಯಕ್ರಮವನ್ನು ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಲತಾ ಕೆ. ನೆರವೇರಿಸಿದರು.
ಬಹುಮಾನ ವಿತರಣೆ ಕಾರ್ಯಕ್ರಮವನ್ನು ಶ್ರೀ ಮಹಾದೇವಿ ಯುವಕ ಮಂಡಲದ ಅಧ್ಯಕ್ಷರಾದ ರಕ್ಷಿತ್ ಅಡ್ಯಾಲು ಮತ್ತು ಪ್ರಧಾನ ಕಾರ್ಯದರ್ಶಿ ಯತೀಶ್ ಪಡ್ನಡ್ಕ ರವರು ನೆರವೇರಿಸಿದರು.
ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಕಾರ್ಯಕಾರಿ ಸಮಿತಿಸದಸ್ಯರಾದ ಜಗದೀಶ್ ಬಾಕಿಮಾರು ಮತ್ತು ಶ್ರೀ ಮಾಹಾದೇವಿ ಯುವಕಮಂಡಲದ ಮಾಜಿ ಅಧ್ಯಕ್ಷರಾದ
ಕೇಶವ ಕಲ್ಲಂದಡ್ಕ ಗಣ್ಯರ ಶುಭಸಂದೇಶ ವಾಚಿಸಿದರು.
ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಸತೀಶ್ ರಾವ್ ಸ್ವಾಗತಿಸಿದರು. ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ರವೀಂದ್ರ ಮೇಲಂಟ ಕಲ್ಲಂದಡ್ಕ ವಂದಿಸಿದರು. ಕುಶಿ ಶ್ರೀಶಾಂತಿ ಕಬಕ ಪ್ರಾರ್ಥಿಸಿದರು. ಶ್ರೀ ಮಹಾದೇವಿ ಧರ್ಮಸೇವಾ ವಿಶ್ವಸ್ಥ ಮಂಡಳಿಯ ಜೊತೆ ಕಾರ್ಯದರ್ಶಿ ವಸಂತ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.