ಪುತ್ತೂರು: ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಆಯುಧ ಪೂಜೆ ಮತ್ತು ಘಟಿಕೋತ್ಸವ ಕಾರ್ಯಕ್ರಮ ಅ.10 ರಂದು ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಶಾರದಾ ಪೂಜೆ ಮತ್ತು ಕಾರ್ಯಾಗಾರದಲ್ಲಿ ಯಂತ್ರೋಪಕರಣ, ಹಾಗೂ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ಮಧ್ಯಾಹ್ನ ಅಖಿಲ ಭಾರತ ವೃತ್ತಿ ಪರೀಕ್ಷೆ ಆಗಸ್ಟ್ 2024 ರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭ ನಡೆಯಿತು.
ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ರವರು ರಾಷ್ಟ್ರೀಯ ಪ್ರಮಾಣ ಪತ್ರಗಳನ್ನು ಬಿಡುಗಡೆಗೊಳಿಸಿದರು ಮತ್ತು ವಿದ್ಯಾರ್ಥಿಗಳಿಗೆ ವಿತರಿಸಿ ಗೌರವಿಸಿದರು. ದ .ಕ. ಗೌಡ ವಿದ್ಯಾಸಂಘ, ಸುಳ್ಯ ಇದರ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮತ್ತು ಸಂಸ್ಥೆಯ ನಿರ್ದೇಶಕ ಸಂಜೀವ ಮಠಂದೂರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎ.ವಿ. ನಾರಾಯಣ್, ಭಾರತ್ ಎಂಟರ್ಪ್ರೈಸಸ್ ಮಾಲಕಿ ಕೃಷ್ಣವೇಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ದ.ಕ. ಗೌಡ ಸಂಘದ ಕೋಶಾಧಿಕಾರಿ ಮಾಧವ ಬೆಳ್ಳಾರೆ, ಜೊತೆ ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ಚಿದಾನಂದ ಬೈಲಾಡಿ, ಜಯರಾಮ ಚಿಲ್ತಡ್ಕ , ಮುರಳೀಧರ ಕೆಮ್ಮಾರ, ಪ್ರಾಚಾರ್ಯ ಪ್ರಕಾಶ್ ಪೈ, ಮಾಜಿ ಪ್ರಾಚಾರ್ಯ ಭವಾನಿ ಗೌಡ, ಮಾಜಿ ಕಛೇರಿ ಅಧೀಕ್ಷಕ ಉಮೇಶ್ ಯಂ. ಉಪಸ್ಥಿತರಿದ್ದರು. ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಶ್ರೀಧರ ಗೌಡ ಕಣಜಾಲು, ಪ್ರವೀಣ್ ಕುಂಟ್ಯಾಣ, ಲಿಂಗಪ್ಪ ಗೌಡ ತೆಂಕಿಲ ಭಾಗವಹಿಸಿದರು. ಸಂಸ್ಥೆಯ ಅಧ್ಯಾಪಕ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.