ಈಜು ಸ್ಪರ್ಧೆಯಲ್ಲಿ ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿಯ ನಂದನ್ ನಾಯ್ಕ್ ರಾಷ್ಟ್ರಮಟ್ಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, (ಪದವಿ ಪೂರ್ವ ಕಾಲೇಜು) ಹಾಗೂ SGFI ವತಿಯಿಂದ Kensington swimming pool banglore ಇಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಅಡ್ಯನಡ್ಕ ವಾರಣಾಶಿ ಸ್ವಿಮ್ಮಿಂಗ್ ಅಕಾಡೆಮಿಯ (Adyanadka) ನಂದನ್ ನಾಯ್ಕ್ ಒಂದು ಚಿನ್ನದ ಪದಕ ಹಾಗು ಎರಡು ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಫಿಲೋಮಿನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ತರಗತಿಯ ವಿದ್ಯಾರ್ಥಿಯಾದ ಇವರು ಮುಕ್ವೆ ಮಜಲುಮಾರು ನಿವಾಸಿ ರವಿ ಸಂಪತ್ ಹಾಗು ಕ್ಷಮಿತ ದಂಪತಿ ಪುತ್ರ. ಇವರಿಗೆ ಕೋಚ್ ಪಾರ್ಥ ವಾರಣಾಶಿ, ನಿರೂಪ್ ಜಿರ್, ವಿಕಾಸ್, ದೀಕ್ಷಿತ್, ವೆಂಕಟೇಶ್, ರಾಜೇಶ್ ರವರು ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here