ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 2 ತಿಂಗಳ ಗೌರವಧನ ಬಿಡುಗಡೆ

0

ಪುತ್ತೂರು:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಎರಡು ತಿಂಗಳ ಗೌರವಧನ ಬಿಡುಗಡೆಯಾಗಿದ್ದು ಅ.19ರೊಳಗೆ ಖಾತೆಗೆ ಜಮೆಯಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೌರವಧನ ಪಾವತಿಯಾಗದಿದ್ದಲ್ಲಿ ಮುಷ್ಕರ ಕೈಗೊಳ್ಳಲು ಸಂಘದಿಂದ ನಿರ್ಧರಿಸಿದ ಬೆನ್ನಲ್ಲೇ ಸರಕಾರ ಎರಡು ತಿಂಗಳ ಗೌರವಧನವನ್ನು ಬಿಡುಗಡೆ ಮಾಡಿದ್ದು ಅ.19ರೊಳಗೆ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.


ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೌರವಧನ ಅ.15ರೊಳಗೆ ಪಾವತಿ ಮಾಡದಿದ್ದಲ್ಲಿ ಅ.22ರಿಂದ ಪುತ್ತೂರು ಸಿಡಿಪಿ ಕಛೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಇದೀಗ ಸರಕಾರ ರಾಜ್ಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ 2 ತಿಂಗಳ ಗೌರವಧನ ಬಿಡುಗಡೆ ಮಾಡಿದ್ದು ಅ.19ರೊಳಗೆ ತಮ್ಮ ಖಾತೆಗಳಿಗೆ ಗೌರವಧನ ಜಮಾ ಮಾಡುವ ಬಗ್ಗೆ ಅಧಿಕಾರಿಗಳು ತಿಳಿಸಿದ ಕಾರಣ ಅ.19ರವರೆಗೆ ಕಾಯಲು ನಿರ್ಧರಿಸಿದ್ದಾರೆ.

ಪ್ರತಿಭಟನೆ-ಅ.19ರ ಬಳಿಕ ನಿರ್ಧಾರ
ಅ.19ರ ನಂತರವೂ ಖಾತೆಗೆ ಗೌರವಧನ ಜಮೆ ಆಗದಿದ್ದಲ್ಲಿ ಪ್ರತಿಭಟನೆ ಬಗ್ಗೆ ಮುಂದಿನ ನಿರ್ಧಾರ ಮಾಡಲಾಗುವುದು.ಗ್ಯಾಸ್ ಬಿಲ್, ಮೊಟ್ಟೆಯ ಬಿಲ್‌ನ ಹಣ ಬಾರದಿದ್ದ ಕಾರಣ ಮಕ್ಕಳಿಗೆ ರಜೆ ನೀಡಲಾಗಿದೆ.ಈ ಬಗ್ಗೆ ಮುಷ್ಕರ ಹಮ್ಮಿಕೊಂಡಿದ್ದೇವೆ.ಇದರ ಬಿಲ್ ಪಾವತಿಯಾಗುವವರೆಗೆ ಮಕ್ಕಳಿಗೆ ರಜೆ ನೀಡಲಾಗಿದೆ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here