ಪುತ್ತೂರು: ಮೂರು ದಿನಗಳ ಹಿಂದೆ ಪುತ್ತೂರು ಲಾಡ್ಜ್ ವೊಂದರಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ವ್ಯಕ್ತಿ ಬರೆದಿಟ್ಟ ಡೆತ್ ನೋಟ್ ಅನ್ನು ಪೊಲೀಸರು ಮುಚ್ಚಿಹಾಕಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಪೆರ್ನೆಯ ಜಯಂತ್ ಎಂಬವರು ಮೃತಪಟ್ಟವರಾಗಿದ್ದು ಅವರು ಪುತ್ತೂರು ಬಸ್ ನಿಲ್ದಾಣದ ಬಳಿಯ ಲಾಡ್ಜ್ ವೊಂದರಲ್ಲಿ ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆ ಮತ್ತು ಅಲ್ಲಿಂದ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಜಯಂತ್ ಅವರು ಮೃತಪಟ್ಟಿದ್ದಾರೆ. ಆದರೆ ಜಯಂತ್ ಅವರು ಡೆತ್ ನೋಟ್ ಬರೆದಿಟ್ಡಿದ್ದಾರೆ. ಡೆತ್ ನೋಟ್ ನಲ್ಲಿ ಏನಿದೆ. ಇದನ್ನು ಪೊಲೀಸರು ಮುಚ್ಚಿ ಹಾಕಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಫೇಸ್ ಬುಕ್ ನಲ್ಲಿ ಕೇಸ್ ನಲ್ಲಿ ʼಪೊಲೀಸರ ಹೆಸರೇ ನಾಪತ್ತೆ. ಡೆತ್ ನೋಟ್ ನಲ್ಲಿ ಏನಿದೆ. ಶಾಸಕರೇ ಒಮ್ಮೆ ವಿಚಾರಿಸಿ ನೋಡಿʼ ಎಂಬ ಬರಹ ರವಾನೆಯಾಗುತ್ತಿದೆ.