ಕಡಬ: ಕಟ್ಟಡ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಡೆದ ಘಟನೆಗೆ ಸಂಬಂಧಿಸಿ ಮಹಿಳೆಯೊಬ್ಬರು ಮಾನಭಂಗ ಯತ್ನದ ದೂರು ದಾಖಲಿಸಿದರೆ, ಮತ್ತೋರ್ವರು ಹಲ್ಲೆಯಾಗಿರುವುದಾಗಿ ಆರೋಪಿಸಿ ದೂರು ನೀಡಿದ್ದು ಇತ್ತಂಡಗಳ ವಿರುದ್ದ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
102 ನೆಕ್ಕಿಲಾಡಿ ಗ್ರಾಮದ ಪುಯಿಲದ ಅಜೀಶ್ ಎಂಬವರು ನೀಡಿದ ದೂರಿನಲ್ಲಿ ಐತ್ತೂರು ಗ್ರಾಮದ ಕಪ್ಪೆ ಹಳ್ಳದ ಜಾಗದ ಬದಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆಯಿದ್ದು ಅಕ್ರಮವಾಗಿ ನಾಲ್ಕು ಜನರನ್ನು ಕೆಲಸಕ್ಕಿಟ್ಟು ಕೆಲಸ ಮಾಡುತ್ತಿದ್ದು ಇದನ್ನು ವೀಡಿಯೋ ಚಿತ್ರೀಕರಣ ಮಾಡಲು ಮುಂದಾದ ವೇಳೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದಲ್ಲದೆ ಬೆತ್ತದ ಕೋಲಿನಲ್ಲಿ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಮಹಿಳೆ ಮತ್ತು ಆಕೆಯ ಪತಿ ಬಾಬು ಅವರ ವಿರುದ್ದ ದೂರು ನೀಡಿದ್ದಾರೆ.
ಐತ್ತೂರು ಗ್ರಾಮದ ಕೆರ್ಮಾಯಿಯ ಮಹಿಳೆಯೊಬ್ಬರು ದೂರು ನೀಡಿ, ಕಪ್ಪೆ ಪಲ್ಲ(ಕೆರ್ಮಾಯಿ) ಎಂಬಲ್ಲಿಯ ಜಾಗದಲ್ಲಿ ಮನೆ ಕೆಲಸ ಮಾಡುತ್ತಿರುವಾಗ ಅಕ್ರಮವಾಗಿ ಜಾಗಕ್ಕೆ ಪ್ರವೇಶಿಸಿ ದೊಣ್ಣೆಯಿಂದ ಹೊಡೆದು , ನೈಟಿಯನ್ನು ಹರಿದು ಹಾಕಿ ಮಾನ ಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಿ ಅಜೀಶ್ ಎಂಬವರ ವಿರುದ್ದ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಕಡಬ ಪೊಲೀಸರು ಇತ್ತಂಡಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.