ಪುತ್ತೂರು: ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ಹಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನ ಚಿನ್ನದ ಸ್ಕಿಂನ ಮೊದಲ ಎ ಸರಣಿ ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿದ್ದು ಬಿ ಸರಣಿಯ ಮೊದಲ ಡ್ರಾ ಕಾರ್ಯಕ್ರಮ ಅ.19ರಂದು ನಡೆಯಿತು.
ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಂ ಸುಂದರ್ ರೈ ಕೊಪ್ಪಳ, ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ನಿಶ್ಮಿತಾ ಕಾಂಪ್ಲೆಕ್ಸ್ ಮಾಲಕ ಪುರಂದರ ರೈ ಕೋರಿಕ್ಕಾರ್, ಪಿಗ್ಮಿ ಕಲೆಕ್ಟರ್ ಧರ್ಣಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮೊದಲ ಡ್ರಾ ನಂಬರ್ 25 ತೇಜಸ್ ಕಲ್ಲಡ್ಕರವರಿಗೆ ಬಂದಿರುತ್ತದೆ.
ಒಟ್ಟು 20 ಕಂತುಗಳು ಪ್ರತಿ ತಿಂಗಳಿಗೆ ರೂ.500 ರಂತೆ ಪಾವತಿಸಿ ಒಟ್ಟು 10 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಪ್ರತಿ ತಿಂಗಳು 19ನೇ ತಾರೀಖಿಗೆ ಗ್ರಾಹಕರ ಸಮ್ಮುಖದಲ್ಲಿ ಡ್ರಾ ನಡೆಸಿ ಅದೃಷ್ಟವಂತರನ್ನು ಆಯ್ಕೆ ಮಾಡಲಾಗುತ್ತಿದ್ದು, ಡ್ರಾ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಬಿ ಸರಣಿಗೆ ಸದಸ್ಯರಾಗಲು ಅವಕಾಶವಿದ್ದು ಸದಸ್ಯರಾಗುವವರು 9980199907 ಗೆ ಸಂಪರ್ಕಿಸಬಹುದು ಎಂದು ಜ್ಯುವೆಲ್ಲರಿ ಮಾಲಕ ಉದಯ ಆಚಾರ್ಯ ಕೃಷ್ಣನಗರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.