ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಗೆ ಪ್ರಶಾಂತಿ ಸದ್ಭಾವನ ಸೇವಾವದೂತ ಗೌರವ ಪ್ರಶಸ್ತಿ ಪ್ರದಾನ

0

ಪುತ್ತುರು:ಶ್ರೀ ಶಿರಡಿ ಸಾಯಿಬಾಬ ಕೇಂದ್ರ ಪುತ್ತೂರು ಹಾಗೂ ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಜಂಟಿ ಆಶ್ರಯದಲ್ಲಿ ಆಯೋಜಿಸಲ್ಪಟ್ಟ ಸಪ್ತ ತಮ ವಿಶೇಷ ಕಾರ್ಯಕ್ರಮದಲ್ಲಿ ಉಡುಪಿ ಶಂಕರಪುರದ ದ್ವಾರಕಾಮಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಗೆ ತನ್ನ ವಿಶೇಷ ವಿನೂತನ ವಿಶೇಷ ಸೇವಾ ಕಾರ್ಯಗಳನ್ನು ಗುರುತಿಸಿ ಸೇವಾವದೂತ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪುಣಚ್ಚ ಅಜೇರು ನಿವಾಸಿ ರತ್ನಾವತಿ ಪ್ರಭು ಅವರ ಎಪ್ಪತ್ತನೇ ಜನ್ಮ ದಿನೋತ್ಸವ ಸಂಭ್ರಮದ ಅಂಗವಾಗಿ ಅನೇಕ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹೋಮ, ಹವನ, ಅಭಿಷೇಕ, ಪೂಜೆ ಇತ್ಯಾದಿ ಕಾರ್ಯಗಳಿಂದ ತೊಡಗಿ ಪೂರ್ಣಹುತಿ ಕಾರ್ಯಕ್ರಮ ನಡೆಯಿತು.ಮಹಿಳೆಯರಿಗೆ ಸೀರೆ ವಿತರಣೆ, ನಗರಸಭೆಯ 8ನೇ ವಾರ್ಡಿನ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಗೌರವ ,21 ರುದ್ರಾಕ್ಷಿ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಮಾಣಿಲಾ ಶ್ರೀ ದುರ್ಗ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಉಡುಪಿ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಉಪಸ್ಥಿತರಿದ್ದರು.ಶ್ರೀ ಸಾಯಿ ಈಶ್ವರ್ ಗುರೂಜಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿ ಶ್ರದ್ಧೆ ನಿಷ್ಠೆ ಹಾಗೂ ಪ್ರಾಮಾಣಿಕತೆಗಳ ಅನುಷ್ಠಾನದಿಂದ ಜೀವನ ಸಾರ್ಥಕ್ಯ ತಡೆಯಬಹುದು. ಪ್ರತಿಯೊಬ್ಬರು ದೈವೀ ಸ್ವರೂಪವೇ ಆಗಿದ್ದಾರೆ ಅದರ ಅರಿವು ಇಲ್ಲದಿದ್ದರಿಂದ ಅನೇಕ ರೀತಿಯಲ್ಲಿ ನಾವು ಲೌಕಿಕವಾಗಿ ಜೀವನ ಸಾಗಿಸುತ್ತಿದ್ದೇವೆ. ಸನಾತನ ಧರ್ಮದ ಉಗಮದ ಈ ಪುಣ್ಯ ಸಂದರ್ಭ ಪ್ರತಿಯೊಂದು ಹಿಂದೂ ಬಾಂಧವರು ಪುನರುತ್ಥಾನಕ್ಕೆ ಕಂಕಣಬದ್ಧರಾಗಿ ಸಂಘಟನಾತ್ಮಕವಾಗಿ ಪಣತೊಡಬೇಕೆಂದು ತಿಳಿಸಿದರು.

ಶ್ರೀ ಮೋಹನದಾಸ ಸ್ವಾಮೀಜಿ ತಮ್ಮ ಉಪನ್ಯಾಸದಲ್ಲಿ ತ್ಯಾಗ ಮತ್ತು ಸೇವೆಯ ಮೂಲಕ ಹಿಂದೂ ಸಂಘಟನೆ ಆಧ್ಯಾತ್ಮಿಕ ತಳಹದಿಯ ಬದುಕನ್ನು ರೂಪಿಸುವಂತೆ ಹೇಳಿ ಧರ್ಮ ಜಾಗೃತಿ ಕಾರ್ಯಕ್ರಮವನ್ನು ರೂಪಿಸಿಕೊಂಡು ಎಲ್ಲಾರೂ ಮಾನವೀಯ ಮೌಲ್ಯಗಳೊಂದಿಗೆ ರಾಷ್ಟ್ರ ನಿರ್ಮಾಣದ ಮಾದರಿ ಸ್ವಸ್ಥ ಸಮಾಜ ನಿರ್ಮಾಣದ ಕುರಿತು ಮಾತನಾಡಿದರು. 2ಕ್ಕೂ ಮಿಕ್ಕಿ ಸೇರಿದ್ದ ಸಹೃದಯಿ ಬಂಧುಗಳು ಶ್ರದ್ಧಾಭಕ್ತಿಯಿಂದ ಮೌನವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು ಶ್ರೀ ಶಿರಡಿ ಸಾಯಿ ಕೇಂದ್ರದ ಸಂತೋಷ್ ಪ್ರಭು ಹಾಗೂ ಪ್ರಶಾಂತಿ ಸದ್ಬಾವನ ಟ್ರಸ್ಟ್ ನ ಎಂ ಮಧುಸೂಧನ್ ನಾಯಕ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here