ಪುತ್ತೂರು: ಇಲ್ಲಿನ ಪರ್ಪುಂಜದ ಸೌಗಂಧಿಕ ಆವರಣದಲ್ಲಿ ನ.2ರಿಂದ 10ರ ವರೆಗೆ ಹವ್ಯಾಸಿ ಛಾಯಾಚಿತ್ರ ಗ್ರಾಹಕ ಅಭಿಷೇಕ.ಡಿ,ಪುಂಡಿತ್ತೂರು ಅವರ ಪಕ್ಷಿ, ವನ್ಯಜೀವಿ-ಪ್ರಕೃತಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.
ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ನ.1, ಶುಕ್ರವಾರ, ಸಂಜೆ 5ಕ್ಕೆ, ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ ಎಂ.ಕೆ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಪಕ್ಷಿ ತಜ್ಞೆ, ವರ್ಣಚಿತ್ರ ಕಲಾವಿದೆ ಪಿ. ವಸಂತಿ ಸಾಮೆತ್ತಡ್ಕ, ಹಕ್ಕಿಗಳ ಕುರಿತಾಗಿ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಬೆಳಗ್ಗೆ 9 ರಿಂದ ಸಂಜೆ 6ರ ವೆರೆಗೆ ಒಂಭತ್ತು ದಿನಗಳ ಕಾಲ ನಡೆಯಲಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಚಿತ್ರಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.
ಛಾಯಾಚಿತ್ರಗ್ರಾಹಕರ ಬಗ್ಗೆ:
ಪುತ್ತೂರು ವಿವೇಕಾನಂದ ಕಾಲೇಜಿನ ನಯನ ಫೊಟೋಗ್ರಫಿ ಕ್ಲಬ್ ಮೂಲಕ ಕ್ಯಾಮರಾ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳಸಿಕೊಂಡ, ಅಭಿಷೇಕ.ಡಿ, ಪುತ್ತೂರಿನ ಸಂಪ್ಯ ನಿವಾಸಿ. ಮೂಲತಃ ಬಲ್ನಾಡಿನ ಪುಂಡಿತ್ತೂರಿನವರಾದ ಇವರು, ಪ್ರಸ್ತುತ ನವದೆಹಲಿಯಲ್ಲಿ ಟೈಮ್ಸ್ ಆಫ್ ಇಂಡಿಯಾದ ಟೈಮ್ಸ್ ಇಂಟರ್ನೆಟ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012-13 ರಿಂದ ಫೊಟೋಗ್ರಫಿಯ ಹವ್ಯಾಸ ಬೆಳೆಸಿಕೊಂಡ ಇವರು, ಕಳೆದ ಮೂರ್ನಾಲ್ಕು ವರ್ಷಗಳಿಂದ ಪಕ್ಷಿ-ವನ್ಯ ಜೀವಿಗಳ ಕುರಿತಾಗಿ ಅವುಗಳ ಜೀವನ ಹಾಗೂ ಛಾಯಾಗ್ರಹಣದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಂತೆಯೇ “ಅಭಿಜ್ಞಾ: ಕ್ಯಾಚ್ವರಿಂಗ್ ಮುಮೆಂಟ್ಸ್” ಲೋಗೋದಡಿ, ತಮ್ಮ ಫೊಟೋಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: 9945854213 – ಅಭಿಷೇಕ ಡಿ. ಪುಂಡಿತ್ತೂರು, 9900409380- ಚಂದ್ರ ಸೌಗಂಧಿಕ