ಹೊಂಡ ಬಿದ್ದ ಮುಡಿಪಿನಡ್ಕ ಸುಳ್ಯಪದವು ಲೋಕೋಪಯೋಗಿ ರಸ್ತೆ

0

ಬಡಗನ್ನೂರು: ಮುಡಿಪಿನಡ್ಕ ಸುಳ್ಯಪದವು  ಲೋಕೋಪಯೋಗಿ ಮೈಂದನಡ್ಕ ಪಕ್ಕ ಪಲ್ಲತ್ತಾರು ಹಾಗೂ ಕನ್ನಡ್ಕ ಭಾಗದಲ್ಲಿ ದೊಡ್ಡ ಗಾತ್ರದ ಹೊಂಡ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಕಳೆದ ಎರಡು ವರ್ಷದ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮೈಂದನಡ್ಕದಿಂದ  ಕನ್ನಡ್ಕದವರೆಗೆ ಸುಮಾರು 2.5 ಕಿ.ಮಿ ಅಭಿವೃದ್ಧಿ ಪಡಿಸಿದ್ದು ಇದೀಗ ಈ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ.

ಈ ರಸ್ತೆಯನ್ನು ಮೈಂದನಡ್ಕದಿಂದ ಪದಡ್ಕವರೆಗೆ  ಕಾಂಕ್ರೀಟ್ ರಸ್ತೆ ಮಾಡಲಾಗಿತ್ತು. ಅದರೆ ಕಾಂಕ್ರೀಟ್ ಮಿಶ್ರಣ ಸರಿಯಾದ ಪ್ರಮಾಣದಲ್ಲಿ ಮಾಡದೆ ಕಳಪೆ ಕಾಮಗಾರಿಯಿಂದ ಒಂದೇ ವರ್ಷದಲ್ಲಿ  ಕಾಂಕ್ರೀಟ್ ,ಜಲ್ಲಿ ಹಾಗೂ ಹೊಯ್ಗೆ ಎದ್ದು ಹೋದ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆ ಮೇಲೆ ಪುನಃ ದುರಸ್ತಿ ಕಾರ್ಯ ನಡೆದಿತ್ತು.

ಪದಡ್ಕ ಭಾಗದಿಂದ ಕನ್ನಡ್ಕ ಭಾಗದ ವರೆಗೆ  ಡಾಮಾರು ರಸ್ತೆ ಈ ಭಾಗವು ಅರಣ್ಯ ಪ್ರದೇಶವಾಗಿರುವುದರಿಂದ ರಸ್ತೆಯ ಎರಡೂ ಬದಿ ಮರಮುಟ್ಟುಗಳು ಬೆಳೆದು ನಿಂತಿದ್ದು ಮಳೆಯ ಸಂದರ್ಭದಲ್ಲಿ ರಸ್ತೆ ಮೇಲೆ ನೀರು ಬೀಳುತ್ತಿರುವುದರಿಂದ ರಸ್ತೆಯ ಮೇಲೆ ದೊಡ್ಡ ದೊಡ್ಡ ಗಾತ್ರದ ಹೊಂಡ ಸೃಷ್ಟಿಯಾಗಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ  ರಸ್ತೆ ಅಭಿವೃದ್ಧಿ  ಕಾಮಗಾರಿ ಪೂರ್ಣಗೊಂಡರೂ  ಗುತ್ತಿಗೆದಾರರಿಗೆ  5 ವರ್ಷದ ವರೆಗೆ ರಸ್ತೆ ದುರಸ್ತಿ ಮಾಡಬೇಕು ಎಂಬ ಷರತ್ತು ಹೊಂದಿದ್ದರೂ  2 ವರ್ಷಗಳಿಂದ ರಸ್ತೆ  ದುರಸ್ತಿ ಕಾಮಗಾರಿ ಕೈಗೊಂಡಿಲ್ಲ  ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ  ಗಮನಿಸಿ  ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಡುಮಲೆ  ಕೋಟಿ ಚೆನ್ನಯರ ಹುಟ್ಟೂರು  ಐತಿಹಾಸಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿ  ಹೊಂದುತ್ತಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳ ವೀಕ್ಷಿಸಲು ವಿವಿಧ ಭಾಗದದಿಂದ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ  ಬರುತ್ತಿದ್ದು ಈ ಭಾಗದ ರಸ್ತೆ ಅವಸ್ಥೆ ಕಂಡು ನೋವು ವ್ಯಕ್ತಪಡಿಸುತ್ತಿದ್ದಾರೆ.

ಮುಡಿಪಿನಡ್ಕ- ಮೈಂದನಡ್ಕ ರಸ್ತೆ ಏಕಮುಖ ರಸ್ತೆ ಅಗಲಿಕರಣ ಆಗಬೇಕಿದೆ
ಮುಡಿಪಿನಡ್ಕ- ಮೈಂದನಡ್ಕ ರಸ್ತೆಯಲ್ಲಿ ಎರಡು ಘನವಾಹನ ಮುಖಾಮುಖಿಯಾದ ಸಂದರ್ಭದಲ್ಲಿ ವಾಹನ ಚಲಾಯಿಸಲು ತೀರ ಕಷ್ಟಕರ. ಚಾಲಕರು ಇದರಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖಾಧಿಕಾರಿಗಳು ಗಮನಿಸಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here