ಪುತ್ತೂರಿನಲ್ಲಿ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಾಸರಗೋಡು ಮೂಲದ ಕಾರ್ಮಿಕರೊಬ್ಬರ ಶವ ರೈಲ್ವೆ ಹಳಿಯಲ್ಲಿ ಪತ್ತೆ

0

ಪುತ್ತೂರು: ಪುತ್ತೂರಿನ ಕಬಕ ಪರಿಸರದಲ್ಲಿ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಾಸರಗೋಡು ಮೂಲದ ಕಾರ್ಮಿಕರೊಬ್ಬರ ಶವ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಹಳಿಯಲ್ಲಿ ಅ.24ರಂದು ಪತ್ತೆಯಾಗಿದೆ.


ಪುತ್ತೂರಿನ ಕಬಕ ಪರಿಸರದಲ್ಲಿ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಾಸರಗೋಡು ಎಣ್ಮಕಜೆ ಗ್ರಾಮದ ಉಕ್ಕಿನಡ್ಕ ತಿಮ್ಮ ನಾಯ್ಕ್ ಅವರ ಪುತ್ರ ಚನಿಯಪ್ಪ ನಾಯ್ಕ್ ಎಸ್ ಯಾನೆ ರಾಧಾಕೃಷ್ಣ ಮೃತಪಟ್ಟವರು.

ಅವರು ಕಬಕ-ಪುತ್ತೂರು ರೈಲ್ವೇ ನಿಲ್ದಾಣದ 100 ಮೀಟರ್ ಅಂತರದಲ್ಲಿ ರೈಲಿನ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ. ರೈಲು ಡಿಕ್ಕಿಯಾದ ರಭಸಕ್ಕೆ ಅವರ ಕಾಲು ಮುರಿತಕ್ಕೊಳಗಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮಂಗಳೂರಿಗೆ ಕೊಂಡೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ರಾಧಾವತಿ, ಪತ್ನಿ ಸುಮತಿ, ಮಕ್ಕಳಾದ ಸಪ್ತಮಿ, ಸಾತ್ವಿಕ್, ಸಹೋದರರಾದ ರಾಜ್‌ಕುಮಾರ್, ಯೋಗೀಶ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here