ನಿಡ್ಪಳ್ಳಿ; ನಾಕುಡೇಲು ಎಂಬಲ್ಲಿಂದ ಕೊಪ್ಪಳ ಮುಡ್ಪಿನಡ್ಕ ಹೋಗುವ ಸಾರ್ವಜನಿಕ ದಾರಿಯಲ್ಲಿ ಕೊಪ್ಪಳ ಎಂಬಲ್ಲಿ ತೋಡಿನ ಬದಿ ದಾರಿ ಕುಸಿದು ಜನರಿಗೆ ನಡೆದಾಡಲು ತೊಂದರೆ ಉಂಟಾಗಿದೆ.
ತೋಡಿನ ಬದಿಯಲ್ಲಿ ಕಾಲುದಾರಿ ಇದ್ದು ತೋಡಿನಲ್ಲಿ ಹೂಳು ತುಂಬಿದ ಕಾರಣ ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ವಿಪರೀತ ನೀರು ತೋಡಿನಲ್ಲಿ ಹರಿಯದೆ ದಾರಿಯ ಮೇಲೆ ಹರಿದು ದಾರಿ ಕೊಚ್ಚಿಕೊಂಡು ಹೋಗಿದ್ದು ದಾರಿ ಬದಿ ಕುಸಿದು ಹೋಗಿದೆ.ಇದರಿಂದ ಜನರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು ದುರಸ್ತಿ ಗೊಳಿಸುವಂತೆ ದಾರಿಯಲ್ಲಿ ಸಂಚರಿಸುವವರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಕುಸಿದ ಕಾರಣ ಶಾಲಾ ಮಕ್ಕಳು ಹೋಗಲು ಕಷ್ಟವಾಗಿತ್ತು. ಇದನ್ನು ಕಂಡ ಸ್ಥಳೀಯರೊಬ್ಬರು ಕುಸಿದ ಜಾಗಕ್ಕೆ ಅಡಿಕೆ ಮರದ ಪಾಲ ಹಾಕಿ ತಾತ್ಕಾಲಿಕವಾಗಿ ಸಂಚರಿಸಲು ವ್ಯವಸ್ಥೆ ಮಾಡಿದ್ದಾರೆ.ಅದರಲ್ಲಿ ಈಗ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಸಂಚರಿಸುತ್ತಿದ್ದಾರೆ.
ದೈವದ ಭಂಡಾರ ಬರುವ ದಾರಿ :
ಹಿಂದಿನಿಂದಲೂ ಗ್ರಾಮದ ಜಾತ್ರೆ ಸಮಯದಲ್ಲಿ ದೇರ್ಲ ಮನೆಯಿಂದ ದೈವದ ಭಂಡಾರ ಉಳ್ಳಾಕುಲು ಮಾಡಕ್ಕೆ ಬರುವ ದಾರಿಯೂ ಇದಾಗಿದೆ.ಆದುದರಿಂದ ಬರುವ ಜಾತ್ರೆಯ ಮೊದಲು ಕುಸಿದ ದಾರಿಯನ್ನು ದುರಸ್ತಿ ಗೊಳಿಸುವಂತೆ ಅಽಕಾರಿಗಳನ್ನು ಮತ್ತು ಜನಪ್ರತಿನಿಽಗಳನ್ನು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.