ಪುತ್ತೂರು: ಪುತ್ತೂರು ಸರಕಾರಿ ಹಾಸ್ಪಿಟಲ್ ನಲ್ಲಿ ವಿಕಲಚೇತನರ ಯು ಡಿ ಐಡಿ ಪ್ರಮಾಣ ಪತ್ರ ಶಿಬಿರವು ಆಡಳಿತ ವೈದಾಧಿಕಾರಿ ಡಾ.ಆಶಾಜ್ಯೋತಿ ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಬಹುಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತಿಯಲ್ಲಿ ಅ.25ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾ.ಅಜಯ್ ಎಂ.ಬಿ, ಪುತ್ತೂರು ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞ ಫಿಸಿಷಿಯನ್ ಡಾ.ಯದು ರಾಜ್ ಡಿ.ಕೆ, ಕಿವಿ ಮೂಗು ಗಂಟಲು ತಜ್ಞೆ ಜೈನಾಬ್ ಸುನು ಆಲಿ, ಮಕ್ಕಳ ತಜ್ಞ ಡಾ.ಪ್ರಶಾಂತ್ ಹಾಗೂ ಪುತ್ತೂರು ತಾಲ್ಲೂಕು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.