ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ದಾರಿಮೀಸ್ ಅಸೋಸಿಯೇಶನ್ ಇದರ 23ನೇ ವಾರ್ಷಿಕೋತ್ಸವ ಮತ್ತು ಶೈಖುನಾ ಉಲಮಾ ಅವರ ಅನುಸ್ಮರಣೆ ಹಾಗು ಧಾರ್ಮಿಕ ಅಧ್ಯಯನ ಶಿಬಿರವು ಅ.29ರಂದು ಬೆಳಿಗ್ಗೆ ಗಂಟೆ 10ಕ್ಕೆ ವಿಟ್ಲದ ಕೆಲಿಂಜ ಜುಮ್ಮಾ ಮಸೀದಿಯ ವಠಾರದಲ್ಲಿ ಜರುಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ದಾರಿಮೀಸ್ ಅಸೋಸಿಯೇಶನ್ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ಕುಂಬ್ರ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕೇರಳದ ಕೊಯಿಲಾಂಡಿಯ ನಂದಿ ಎಂಬಲ್ಲಿ ಕಲಿತವರು ವಿದ್ವಾಂಸರಾಗಿ ಅವರಿಗೆ ದಾರಿಮಿ ಎಂಬ ಬಿರುದು ಬಂದಿರುತ್ತದೆ. ಸುಮಾರು 5 ಸಾವಿರ ಮಂದಿ ದೇಶದಲ್ಲಿ ದಾರಿಮಿಗಳಿದ್ದಾರೆ. ಜಿಲ್ಲೆಯಲ್ಲಿ ಸುಮಾರು 300 ಮಂದಿ ಮಂದಿ ದಾರಿಮಿಗಳಿದ್ದಾರೆ. ಆ ದಾರಿಮಿಗಳ ದಕ್ಷಿಣ ಕನ್ನಡ ಜಿಲ್ಲಾ ಸಂಘಟನೆಯಾಗಿ ದಾರಿಮೀಸ್ ಅಸೋಸಿಯೇಶನ್ಗೆ 23 ವರ್ಷ ಆಗಿದ್ದು, ಅದರ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಅ.29ರಂದು ಬೆಳಿಗ್ಗೆ ಸ್ಥಳೀಯ ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಂ ಕಂಪದ ಬೈಲು ಧ್ವಜಾರೋಹಣ ನಡೆಸುವ ಮೂಲಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಬಳಿಕ ನಡೆಯುವ ಧಾರ್ಮಿಕ ಅಧ್ಯಯನ ಶಿಬಿರವನ್ನು ಕೇರಳದ ವಾಗ್ಮಿ ಅಲವಿ ದಾರಿಮಿ ಕುಝಿಮಣ್ಣ ಅವರು ನಡೆಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ವಹಿಸಲಿದ್ದಾರೆ. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮತ್ತು ಉಸ್ಮಾನುಲ್ ಫೈಝಿ ತೋಡಾರ್ ಅವರು ಅನುಗ್ರಹ ಭಾಷಣ ನಡೆಸಲಿದ್ದು, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಕೋಶಾಧಿಕಾರಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ ಎಂದವರು ಹೇಳಿದರು.
ಅನುಸ್ಮರಣಾ ಕಾರ್ಯಕ್ರಮ:
ಸಮಸ್ತ ಎಂಬ ಪ್ರತಿಷ್ಠಿತ ಉಲಮಾ ಸಂಘಟನೆಯ 40 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಗೈದು ಅಗಲಿದ ಉಲಮಾ ನಾಯಕ, ವಿಶ್ವೋತ್ತರ ವಿದ್ವಾಂಸರಾದ ಶೈಖುನಾ ಶಂಸುಲ್ ಉಲಮಾ ಅವರ ಅನುಸ್ಮರಣಾ ಕಾರ್ಯಕ್ರಮ ಇದೇ ಸಮಾರಂಭದಲ್ಲಿ ಸಯ್ಯಿದ್ ಎನ್ಪಿಎಂ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ಅವರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಸಾದತ್ಗಳು ಮತ್ತು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುಮರು 1500 ಮಂದಿ ಸೇರುವ ನಿರೀಕ್ಷೆ ಇದೆ ಎಂದು ಅಬ್ದುಲ್ ಕರೀಂ ದಾರಿಮಿ ಕುಂಬ್ರ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ವಿನರ್ ಮಹಮ್ಮದ್ ಆಲಿ ದಾರಿಮಿ ಕುಕ್ಕಾಜೆ, ದ.ಕ.ಜಿಲ್ಲಾ ಜಂಇಯ್ಯುತುಲ್ನ ಖತೀಬರಾದ ಅಬ್ಬಾಸ್ ದಾರಿಮಿ ಕೆಲಿಂಜ ಅವರು ಉಪಸ್ಥಿತರಿದ್ದರು.