ಪುತ್ತೂರು: ಕುಡಿಪ್ಪಾಡಿ ಗ್ರಾಮದ ಅರ್ಕ ಶ್ರೀ ನಾಗದೇವರು, ರಕ್ತೇಶ್ವರಿ, ಮಲರಾಯ ಮತ್ತು ಧೂಮಾವತಿ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿಯ ಮನವಿ ಪತ್ರವನ್ನು ಇತ್ತೀಚೆಗೆ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಬಟ್ರುಪ್ಪಾಡಿಯವರು ಬಟ್ರುಪ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.
ಶತಮಾನದ ಇತಿಹಾಸವಿರುದ ಈ ಕ್ಷೇತ್ರದಲ್ಲಿ ನಾಗ ಮತ್ತು ದೈವಗಳ ಸಾನ್ನಿಧ್ಯಗಳು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಸ್ಥಳೀಯರಲ್ಲಿ ನಾನಾ ರೀತಿಯ ಸಂಕಷ್ಟಗಳು ಕಾಡಿದಾಗ ಪ್ರಶ್ನಾ ಚಿಂತನೆಯನ್ನು ಮಾಡಲಾಗಿದೆ. ಆ ಪ್ರಕಾರ ಕಾರಣಿಕ ದೈವಗಳ ಸಾನ್ನಿಧ್ಯ ಅಭಿವೃದ್ಧಿಯಾಗದೆ ಸ್ಥಳೀಯರಿಗೆ, ಈ ಜಾಗಕ್ಕೆ ಸಂಬಂಧಿಸಿದವರಿಗೆ ಸಂಕಷ್ಟ ನಿವಾರಣೆಯಾಗದು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಜೀರ್ಣೋದ್ಧಾರಕ್ಕೆ ಮುಂದಡಿಯಿಡಲಾಗಿದೆ.
ಈ ವೇಳೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧೀರ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಲಾಲ್, ಕೋಶಾಧಿಕಾರಿ ರಾಧಾಕೃಷ್ಣ ಪೂಜಾರಿ ಅರ್ಕ, ಉಪಾಧ್ಯಕ್ಷರಾದ ಕೇಶವ ಪೂಜಾರಿ ಪೆಲತ್ತಡಿ, ಜಯರಾಮ ನಾಐಕ್ ಅರ್ಕ, ಆನಂದ ಪೂಜಾರಿ ಅರ್ಕ, ಜತೆ ಕಾರ್ಯದರ್ಶಿಗಳಾದ ಶ್ರೀಧರ ಪೂಜಾರಿ ಅರ್ಕ, ನಾಗೇಶ ಪೂಜಾರಿ ಪೆಲತ್ತಡಿ, ಗಿರೀಶ ಗೌಡ ಗುತ್ತು, ನಾಗದೇವರ ಜಾಗದ ಮ್ಹಾಲಕ ಕೆ. ವಿಜಯ ಕುಮಾರ್, ದೈವಗಳ ಜಾಗದ ಮ್ಹಾಲಕ ಸೀತಾರಾಮ ನಾಯಕ್ ಅರ್ಕ ಹಾಗೂ ಸಮಿತಿಯ ಸದಸ್ಯರು, ಊರ ಭಕ್ತಾದಿಗಳು ಪಾಲ್ಗೊಂಡರು.