ಬಡಗನ್ನೂರು: ಮೇಳೈಸಿದ ಗ್ರಾಮ ಸಾಹಿತ್ಯ ಸಂಭ್ರಮ, ಸಾಧಕರಿಗೆ ಸನ್ಮಾನ

0

ಬಡಗನ್ನೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಬಡಗನ್ನೂರು , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಪೋಷಕತ್ವದಲ್ಲಿ, ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡಗನ್ನೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು  ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ-17  ಕಾರ್ಯಕ್ರಮವು ಬಡಗನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ.26 ರಂದು ನಡೆಯಿತು. 

ಕಾರ್ಯಕ್ರಮವನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೆವಕಜೆ  ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಮಕ್ಕಳಲ್ಲಿನ ಸಾಹಿತ್ಯ ಅಭಿರುಚಿಗೆ ಪ್ರೇರಣೆ ನೀಡುತ್ತದೆ .ಗ್ರಾಮೀಣ ಪ್ರದೇಶವಾದ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದಲ್ಲಿ  ವಿವಿಧ ರೀತಿಯ ಅಭಿರುಚಿ ಹೊಂದಿರುವ ಹಲವಾರು ಮಕ್ಕಳಿಗೆ ವೇದಿಕೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಡಗನ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಮಾತನಾಡಿ ಸಾಹಿತ್ಯದಿಂದ ಮಕ್ಕಳು ಮತ್ತು ಯುವ ಜನತೆಗೆ ಆಸಕ್ತಿ ಮೂಡಿಸುವ ಉದ್ದೇಶವಾಗಿದೆ. ಮಕ್ಕಳು ಮತ್ತು ಯುವಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಕಾರ್ಯಕ್ರಮವಾಗಿದೆ. ಇದು ಮಕ್ಕಳ ಬೌದ್ಧಿಕ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಸಹಕಾರಿಯಾಗಿದೆ ಎಂದರು.

ಅನುದಾನಿತ ಹಿ ಪ್ರಾ ಶಾಲೆಯ ನಿವೃತ್ತ ಮುಖ್ಯಗುರು ಬಾಲಸುಬ್ರಹ್ಮಣ್ಯ  ಕೆ.ರಾಮಣ್ಣ ಗೌಡ ಬಸವನಹಿತ್ತಿಲು ಸಾಧಕರನ್ನು ಅಭಿನಂದಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮ ಮಕ್ಕಳಿಗೆ ವಿವಿಧ ಗೋಷ್ಠಿಯಲ್ಲಿ ಭಾಗವಹಿಸಲುಸುಂದರ ವೇದಿಕೆ.ವಿವಿಧ ಕ್ಷೇತ್ರದ ಸಾಧನೆ ಮಾಡಿದ ಒಂಭತ್ತು ಸಾಧಕರು ಪ್ರಶಸ್ತಿಯನ್ನು ಹರಸಿಕೊಂಡು ಹೋದವರಲ್ಲ.ಬಡತನದಲ್ಲಿ ಬೆಳೆದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದವರು. ಇವರ ಪರಿಶ್ರಮದ ದುಡಿಮೆಯಿಂದ ಸಾಧಕರಾಗಿ  ಇಂದು ಅಭಿನಂದಿಸಲ್ಪಡುತ್ತಿದ್ದಾರೆ. ಪುತ್ತೂರು ಸಾಹಿತ್ಯ ಪರಿಷತ್ತಿನ ಈ ಕಾರ್ಯ ಶ್ಲಾಘನೀಯ ಎಂದರು.

 ಸಾಹಿತ್ಯ  ಮೂಲಕ ಭವಿಷ್ಯದ ಭವ್ಯ ಭಾರತ ನಿರ್ಮಾಣ ಸಾಧ್ಯ – ಮಹಮ್ಮದ್ ಬಡಗನ್ನೂರು
ಕಳೆದ ಸುಮಾರು 38 ವರ್ಷಗಳಿಂದ ರಾಜಕೀಯ, ಸಾಮಾಜಿಕ  ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಧಕರಾಗಿ ಅಭಿನಂದಿಸಲ್ಪಟ್ಟ ಮಹಮ್ಮದ್ ಬಡಗನ್ನೂರು ಅಭಿನಂದನೆ ಸ್ವೀಕರಿಸಿ ಮಾತನಾಡಿ,  ಸಾಹಿತ್ಯ ವಿಚಾರದ ಮೂಲಕ ಭವಿಷ್ಯದ ಭವ್ಯ ಭಾರತ ನಿರ್ಮಾಣ ಸಾಧ್ಯ.ಸಾಹಿತ್ಯ ವಿಚಾರದಾರೆ,  ಸಾಂಸ್ಕೃತಿಕ ವಿಚಾರಧಾರೆ ಮತ್ತು ಈ ಮಣ್ಣಿನ ಕಣ, ಜಲ, ವಿಚಾರಧಾರೆಗಳನ್ನು ಪ್ರೋತ್ಸಾಹಿಸುವ ಮಾನದಂಡ ಮೂಲಕ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದರು. ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಬಡಗನ್ನೂರು ಗ್ರಾಮದಲ್ಲಿ  ಆಯೋಜಿಸಿದ ಸಂಚಾಲಕ ನಾರಾಯಣ ಕುಂಬ್ರ ರವರೆಗೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಬಡಗನ್ನೂರು ಸ. ಹಿ. ಉ. ಪ್ರಾ ಶಾಲಾ ವಿದ್ಯಾರ್ಥಿನಿ ವಿಸ್ಮಿತಾ. ಎಂ ರವರು ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದ ಮಕ್ಕಳಿಗೆ ಸಾಹಿತ್ಯ  ಒಲವು ಮೂಡಿಸಿದರೆ ಮುಂದಿನ ಜೀವನ ಉಜ್ವಲವಾಗಲು ಸಾಧ್ಯ , ಸಾಹಿತ್ಯವನ್ನು ಪ್ರೀತಿಸಬೇಕು.ಸಾಹಿತ್ಯ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.  

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಾಹಿತ್ಯ ಕೃಷಿ ಮಾಡುವ ಮೂಲಕ  ಎಲ್ಲರೂ ಸಾಹಿತ್ಯಿಗಳಾಗಬೇಕು ಸಾಹಿತ್ಯ ಸಾಯಬಹುದು ಅದರೆ ಸಾಹಿತ್ಯ ಸಾಯುವುದಿಲ್ಲ. ಮಕ್ಕಳು ದೇಶದ ಸಂಪತ್ತುಗಳಾಗಬೇಕು.ಆ ಮೂಲಕ ಸಾಹಿತ್ಯವನ್ನು ಬೆಳೆಸಬೇಕು.ಸಾಹಿತ್ಯವನ್ನು ಪ್ರೀತಿಸಬೇಕು ಮಕ್ಕಳು ದೇಶದ ಸಂಪತ್ತುಗಳಾಗಬೇಕು. ಸಾಹಿತಿ ಸಾಯಬಹುದು ಅದರೆ ಸಾಹಿತ್ಯ ಸಾಯುವುದಿಲ್ಲ. ಸಾಹಿತ್ಯ ಭಾಷಾ ಸಾಹಿತ್ಯ  ರಕ್ತಗತ ಸಂಬಂಧ , ಮುಂದೆ ಪ್ರತಿಭಾವಂತರಾಗಿ  ದೇಶದ ಪ್ರಜೆಗಳಾಗಿ ಬೆಳೆಯಿರಿ ಎಂದರು.

ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಬಡಗನ್ನೂರು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ  ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.

ಬಡಗನ್ನೂರು ಸ.ಹಿ.ಉಪ್ರಾ.ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಸ್ವಾಗತಿಸಿದರು. ಗ್ರಾಮ  ಸಾಹಿತ್ಯ  ಸಂಭ್ರಮದ  ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ಮಾತನಾಡಿದರು. ಚಿಗುರೆಲೆ ಕಲಾ ಬಳಗದ  ಸದಸ್ಯೆ ಅಕ್ಷತಾ ನಾಗಕಜೆ ವಂದಿಸಿದರು.ಕೊಯಿಲ ಬಡಗನ್ನೂರು ಶಾಲಾ ಸಹ ಶಿಕ್ಷಕ ಗಿರೀಶ್ ಹಾಗೂ ಶ್ರೀಶಾ ವಾಸವಿ ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:-
ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ  ಕೆ. ಸಿ. ಪಾಟಾಳಿ ಪಡುಮಲೆ  ,ಡಾ. ರವೀಶ್ ಪಡುಮಲೆ , ಡಾ. ಹರಿ ಪ್ರಸಾದ್ ಎಸ್  ವಿಶ್ವನಾಥ ಪೂಜಾರಿ ಪೂಜಾರಿಮೂಲೆ , ಶಂಕರಿ ಪಟ್ಟೆ, ವಿದುಷಿ ಕುದ್ಕಾಡಿ ನಯನ. ವಿ. ರೈ,  ಮಹಮ್ಮದ್ ಬಡಗನ್ನೂರು, ಶ್ರೀಶಾ ವಾಸವಿ ತುಳುನಾಡ್, ನಾಗಪ್ಪ ಪಡುಮಲೆ ಇವರನ್ನು  ಅನುದಾನಿತ ಹಿ ಪ್ರಾ ಶಾಲೆಯ ನಿವೃತ್ತ ಮುಖ್ಯಗುರು ಬಾಲಸುಬ್ರಹ್ಮಣ್ಯ,  ಕೆ.ರಾಮಣ್ಣ ಗೌಡ ಬಸವನಹಿತ್ತಿಲು ಪೇಟ ಧರಿಸಿ  ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಸಾಂಕೇತಿಕ ಕವಿ ಗೋಷ್ಠಿ:-
ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮ ವ್ಯಾಪ್ತಿಯ ಎಂಟು ಶಾಲಾ ವಿದ್ಯಾರ್ಥಿಗಳಿಂದ ಸಾಂಕೇತಿಕವಾಗಿ ವೇದಿಕೆಯಲ್ಲಿ  ಗಣ್ಯರ ಉಪಸ್ಥಿತಿಯಲ್ಲಿ  ಕವಿ ಗೋಷ್ಠಿ ನಡೆಯಿತು.

ಮೆರವಣಿಗೆ:-
ಬೆಳಗ್ಗೆ  ವಿದ್ಯಾರ್ಥಿ ಸಭಾಧ್ಯಕ್ಷರನ್ನು  ಗಣ್ಯರಿಂದ ಪೇಟ ತೊಡಿಸಿ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಕರೆತರಲಾಯಿತು.

ಸಮಾರೋಪ:-
ಸಮಾರೋಪ ಭಾಷಣವನ್ನು ಸುಳ್ಯಪದವು  ಸರ್ವೋದಯ ಪ್ರೌಢಶಾಲಾ  ವಿದ್ಯಾರ್ಥಿನಿ ಕು. ಫಾತಿಮತ್ ರಮೀಸ ಮಾಡಿದರು.

ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ಮಕ್ಕಳನ್ನು ಗೌರವಿಸುವ ಕಾರ್ಯ ಬಡಗನ್ನೂರು ಸಾಹಿತ್ಯ ಸಂಭ್ರಮದಲ್ಲಿ ನಡೆದಿದೆ.ನಾಡುನುಡಿ ಸಂತತಿ ಬೆಳಗಲಿ  ಈ ಭಾಗದಲ್ಲಿ  ವಿದ್ಯಾಸಂಸ್ಥೆ ಮುಖ್ಯಸ್ಥರು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಶಿಕಣಾಭಿಮಾನಿಗಳು  ಹಾಗೂ ಊರಿವರು ಭಾಗವಹಿಸಿರುವುದು ಸಂತೋಷಕರವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಹೋಬಳಿ ಘಟಕದ ಅಧ್ಯಕ್ಷರಾದ ಕಡಮಜಲು ಸುಭಾಷ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಸುಳ್ಯಪದವು ಬಾಲಸುಬ್ರಹ್ಮಣ್ಯ ಶಾಲಾ ಸಹಶಿಕ್ಷಕಿ ಪ್ರೀತಾ ಎನ್, ಬಡಗನ್ನೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಗ್ರಾ.ಪಂ ಸದಸ್ಯರಾದ ಸಂತೋಷ್ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ಸುಜಾತ ಮೈಂದನಡ್ಕ ,ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಎಂಟು ಶಾಲಾ ಶಿಕ್ಷಕರುಗಳು ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು  ಶಿಕ್ಷಣಾಭಿಮಾನಿಗಳು ಭಾಗವಹಿಸಿದ್ದರು.

ವಿವಿಧ ಕವಿ ಗೋಷ್ಠಿ:-
ಗೋಷ್ಠಿ-1  ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಅಭಿಯಾನ (ಐಎಎಸ್, ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ)ಬಗ್ಗೆ ಪುತ್ತೂರು .ಕ.ಸಾ.ಪ , ಐ.ಎ.ಎಸ್ ದರ್ಶನ ಪ್ರೇರಕ ಭಾಷಣಕಾರರಾದ ಪ್ರಣವ್ ಭಟ್ ಇವರಿಂದ ಉಪನ್ಯಾಸ ನಡೆಯಿತು.

ಕೊಯಿಲ ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ  ಗೌರವ ಉಪಸ್ಥಿತಿಯಲ್ಲಿದ್ದರು ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ಶ್ರೀಶಾವಾಸವಿ ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು.

ಗೋಷ್ಠಿ-2  ಬಾಲ ಕವಿಗೋಷ್ಠಿ 
ಕಾರ್ಯಕ್ರಮವು ಪಟ್ಟೆ ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ಕು। ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗೋಷ್ಠಿ-3 
ಬಾಲಕಥಾಗೋಷ್ಠಿಯು ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ  ರಾಜ್‌ ಗೋಪಾಲ ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ಶ್ರೀಲಕ್ಷ್ಮಿ ಮೊಳೆಯಾರ್ ಕಾರ್ಯಕ್ರಮ ನಿರೂಪಿಸಿದರು.

ಗೋಷ್ಠಿ-4 
ಪ್ರವಾಸಕಥನ’ ಲೇಖನ ವಾಚನ ಗೋಷ್ಠಿಯು ಸಜಂಕಾಡಿ ಸ.ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಸುಮಲತಾ ಪಿ.ಕೆ. ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯೆ ಪ್ರಿಯಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:-
ಸ.ಉ.ಹಿ.ಪ್ರಾ ಶಾಲೆ ಬಡಗನ್ನೂರು, ಸ.ಹಿ,ಪ್ರಾ ಶಾಲೆ ಲ ಶ್ರೀ ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ. ಶಾಲೆ ಸುಳ್ಯಪದವು, ಸರ್ವೋದಯ ಪ್ರೌಢಶಾಲೆ ಸುಳ್ಯಪದವು, ಸ.ಹಿ.ಪ್ರಾ ಶಾಲೆ ಪಡುಮಲೆ, ಪ್ರತಿಭಾ ಅನುದಾನಿತ ಪ್ರೌಢಶಾಲೆ ಪಟ್ಟೆ ಶ್ರೀಕೃಷ್ಣ ಅನುದಾನಿತ ಹಿ.ಪ್ರಾ ಶಾಲೆ ಪಟ್ಟೆ ಸರಕಾರಿ ಹಿ.ಪ್ರಾ. ಸಜಂಕಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here