ಪುತ್ತೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘದ ವತಿಯಿಂದ ಬೊಳಂತಕೋಡಿ ಈಶ್ವರ ಭಟ್ಟರ ಸ್ಮರಣಾರ್ಥ ಕನ್ನಡ ಕವಿಗೋಷ್ಠಿಯು ನ.1ರಂದು ಸಂಜೆ ಗಂಟೆ 3.45ಕ್ಕೆ ರಾಧಾಕೃಷ್ಣ ರಸ್ತೆಯ ಬಳಿಯ ಅನುರಾಗ ವಠಾರದಲ್ಲಿ ನಡೆಯಲಿದೆ.
ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ ನರೇಂದ್ರ ರೈ ದೇರ್ಲ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೊ. ವಿ.ಬಿ. ಅರ್ತಿಕಜೆ, ಪ್ರೊ.ಹರಿನಾರಾಯಣ ಮಾಡಾವು, ಪರೀಕ್ಷಿತ ತೋಳ್ಪಾಡಿ, ಜಯಾನಂದ ಪೆರಾಜೆ, ಜನಾರ್ದನ ದುರ್ಗ, ಸಿ.ಶೇ ಕಜೆಮಾರ್, ವಿಶ್ವನಾಥ ಕುಲಾಲ್, ಕವಿತ ಅಡೂರು, ಡಾ. ಮೈತ್ರಿ ಭಟ್, ಮಲ್ಲಿಕ ಜೆ ರೈ, ಶಾಂತ ಪುತ್ತೂರು, ಕು.ಅಕ್ಷರ ಕೆ.ಟಿ ಅವರು ಕವನ ಮಂಡಿಸಲಿದ್ದಾರೆ ಎಂದು ಕರ್ನಾಟಕ ಸಂಘದ ಪ್ರಕಟಣೆ ತಿಳಿಸಿದೆ.