ನೆಲ್ಯಾಡಿ:2024-25ನೇ ಶೈಕ್ಷಣಿಕ ವರ್ಷದ ಉಪ್ಪಿನಂಗಡಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ/ಬಾಲಕಿಯರ ಕ್ರೀಡಾಕೂಟ ಅ.22 ಮತ್ತು 23ರಂದು ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಕ್ರೀಡಾಕೂಟವನ್ನು ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಗಳು ವ್ಯಕ್ತಿ ಹಾಗೂ ಸಮಾಜಕ್ಕೆ ಅತ್ಯಂತ ಮುಖ್ಯವಾದ ಭಾಗವಾಗಿದೆ ಕ್ರೀಡಾ ಚಟುವಟಿಕೆಗಳು ವ್ಯಕ್ತಿಗಳಲ್ಲಿ ಹಾಗೂ ಸಮಾಜದಲ್ಲಿ ಸಂತೋಷ, ನೆಮ್ಮದಿ, ಉತ್ಸಾಹವನ್ನು ಮೂಡಿಸುವಂತಹ ಚಟುವಟಿಕೆಗಳಾಗಿದೆ ಎಂದು ಹೇಳಿದರು.
ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಕ್ರಪಾಣಿ.ಎ.ವಿ. ಧ್ವಜಾರೋಹಣ ನೆರವೇರಿಸಿದರು. ಅಶೋಕ್ ಟ್ರಾನ್ಸ್‌ಪೋರ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಇಕ್ಬಾಲ್, ನೆಲ್ಯಾಡಿ ಭಾರತ್ ಕನ್‌ಸ್ಟ್ರಕ್ಷನ್‌ನ ಸಿವಿಲ್ ಇಂಜಿನಿಯರ್ ಕೆ.ಪಿ.ಟಿಟ್ಟಿ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು. ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಡಾ.ವರ್ಗೀಸ್ ಕೈಪನಡ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಸಿಆರ್‌ಪಿ ಪ್ರಕಾಶ್, ನೆಲ್ಯಾಡಿ ಬೆಥನಿ ಐಟಿಐನ ಪ್ರಾಚಾರ್ಯ ಸಜಿ ಕೆ ತೋಮಸ್, ನೆಲ್ಯಾಡಿ ಜೆಸಿಐನ ಅಧ್ಯಕ್ಷೆ ಸುಚಿತ್ರಾ ಬಂಟ್ರಿಯಾಲ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಉಪಾಧ್ಯಕ್ಷ ಸಣ್ಣಿ, ಜೊತೆ ಕಾರ್ಯದರ್ಶಿ ಮೇರಿ ಸ್ಟೆಫಿ ಮೊದಲಾದವರು ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕ ಚಾರ್ಜ್ ಕೆ ತೋಮಸ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಜೋಸ್ ಪ್ರಕಾಶ್ ವಂದಿಸಿದರು. ಶಿಕ್ಷಕಿ ಎಲಿಸಬೆತ್ ಎನ್.ಪಿ ಕಾರ್ಯಕ್ರಮ ನಿರೂಪಿಸಿದರು. ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ವಿವಿಧ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪ್ಪಿನಂಗಡಿ ವಲಯದ 28 ಪ್ರಾಥಮಿಕ ಹಾಗೂ 18 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಸನ್ಮಾನ:
ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಪಿ.ಪಿ.ವರ್ಗೀಸ್, ಕೆ.ಪಿ ತೋಮಸ್, ಸರ್ವೋತ್ತಮ ಗೌಡ, ಅಬ್ರಹಾಂ ಕೆ.ಪಿ., ಅಬ್ದುಲ್ ಖಾದರ್, ಗಂಗಾಧರ ಶೆಟ್ಟಿ ಹಾಗೂ ಚೆನ್ನೈನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಜಾನ್ ಮಾಡ್ತಾ, ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಆನೆಟ್ ರಿಶಲ್‌ರವರನ್ನು ಸನ್ಮಾನಿಸಲಾಯಿತು.