ಪುತ್ತೂರು: ಬೊಳುವಾರು ಸುಶ್ರುತ ಆಯುರ್ವೇದ ಆಸ್ಪತ್ರೆ ಹಾಗೂ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪ್ರತೂರು ಇದರ ಸಹಯೋಗದಲ್ಲಿ ವಿದ್ದಾಗ್ನಿಕರ್ಮ ಒಂದು ದಿನದ ಪ್ರಾಯೋಜಿತ ಕಾರ್ಯಾಗಾರ ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಿತು. ಎಎಫ್ ಐ ಮಂಗಳೂರು ಅಧ್ಯಕ ಡಾ.ಕೃಷ್ಣ ಗೋಖಲೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಚಂದ್ರಕುಮಾರ್‌ರವರು ದೇಶ್‌ಮುಖ್ ಮಾಹಿತಿ ನೀಡಿದರು. ಎಎಫ್‌ಐ ‘ಪುತ್ತೂರು ಅಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ, ಕಾರ್ಯದರ್ಶಿ ಡಾ.ಮುರಳೀಕೃಷ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಜಯಶ್ರೀ ಆರ್. ಪೆರುವಾಜೆ ಪ್ರಾರ್ಥಿಸಿ ಕಾರ್ಯಕ್ರಮ ಸಂಯೋಜಕ ಡಾ.ರವಿಶಂಕರ್ ಪೆರುವಾಜೆ ಸ್ವಾಗತಿಸಿದರು. ಡಾ.ಹೇಮಚಂದ್ರ ಶೆಟ್ಟಿ ವಂದಿಸಿ ಡಾ.ಯಾದವಿ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.