ಪುತ್ತೂರು: ಇಲ್ಲಿನ ಬನ್ನೂರು ಅಯೋಧ್ಯ ನಗರ ನಿವಾಸಿ, ನಾರಾಯಣ ಪೂಜಾರಿಯವರು (ವ.55) ಅಲ್ಪಕಾಲದ ಅಸೌಖ್ಯದಿಂದ ಅ.25 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಅರುಣಾ ನಾರಾಯಣ ಪೂಜಾರಿ , ಮಕ್ಕಳಾದ ಲತಾಶ್ರೀ ಮತ್ತು ಅಭಿಷೇಕ್ ಹಾಗೂ ಸಹೋದರರಾದ ವೆಂಕಪ್ಪ ಪೂಜಾರಿ ,ಕೃಷ್ಣಪ್ಪ ಪೂಜಾರಿ, ಸಹೋದರಿ ಭವಾನಿ ಸಹಿತ ಕುಟುಂಬ ವರ್ಗವನ್ನು ಅಗಲಿದ್ದಾರೆ.