ಅಳಕೆಮಜಲು ಶ್ರೀ ಶಾರದಾಂಭ ಭಜನಾ ಮಂಡಳಿಯಲ್ಲಿ ವಾರ್ಷಿಕ ಲೆಕ್ಕ ಪತ್ರ ಮಂಡನೆ – ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ ಉಪಾಧ್ಯಕ್ಷರಾಗಿ ಉದಯ್ ಕುಲಾಲ್ ಪುಂಡಿಕಾಯಿ ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಗೌಡ ಪೆಲತ್ತಿಂಜ, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್ ಪುಂಡಿಕಾಯಿ

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂಡಳಿಯ ವಾರ್ಷಿಕ ಲೆಕ್ಕ ಪತ್ರ ಮಂಡನಾ ಸಭೆ ಹಾಗೂ ನೂತನ ಸಮಿತಿ ರಚನೆಯು ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ ಅಳಕೆಮಜಲು ಹಾಗು ಗೌರವಾಧ್ಯಕ್ಷರಾದ ಪಿ. ರಾಜಾರಾಮಾ ಶೆಟ್ಟಿ ಕೋಲ್ಪೆಗುತ್ತುರವರ ನೇತೃತ್ವದಲ್ಲಿ ನಡೆಯಿತು.

ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಉದಯ್ ಕುಲಾಲ್ ಪುಂಡಿಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಗೌಡ ಪೆಲತ್ತಿಂಜ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಉರಿಮಜಲು, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್ ಪುಂಡಿಕಾಯಿರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ನಿಕಟ ಪೂರ್ವ ಪದಾಧಿಕಾರಿಗಳಾದ ತಿರುಮಲೇಶ್ವರ್ ನಾಯ್ಕ್ , ಸುಧೀರ್ ನಾಯ್ಕ್ ಕೆಮನಾಜೆ, ಬಾಸ್ಕರ್ ರೈ ಅಳಕೆಮಜಲು, ಸಮಿತಿಯ ಸದಸ್ಯರಾದ ಕೃಷ್ಣಪ್ಪ ಕೆಮನಾಜೆ, ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರದೀಪ್ ಶೆಟ್ಟಿ ಅಳಕೆಮಜಲು, ಸುಂದರ್ ಪೂಜಾರಿ ,ಯಾದವ ಉರಿಮಜಲು, ಮಹಿಳಾ ಸಮಿತಿಯ ಅಧ್ಯಕ್ಷರಾದ ಗೀತಾ ನಾಯ್ಕ್ ಅಳಕೆಮಜಲು, ಉಪಾಧ್ಯಕ್ಷರಾದ ರೂಪಾ ಕಿಶೋರ್ ಪುಂಡಿಕಾಯಿ, ಪದಾಧಿಕಾರಿಗಳಾದ ಭವ್ಯ ಪೆಲತ್ತಿಂಜ, ಸುಗಂಧಿನಿ ಪೆಲತ್ತಿಂಜ, ಆಶಾ ನಾಯ್ಕ್ ಅಳಕೆಮಜಲು ಹಾಗೂ ವಿವಿಧ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ನಡೆಯಿತು.

LEAVE A REPLY

Please enter your comment!
Please enter your name here