ರಾಯಲ್ ಎನ್‌ಫೀಲ್ಡ್ ಬುಲೆಟ್ ಶೋರೂಂ ‘ಏಸ್ ಮೊಬೈಕ್’ ಶುಭಾರಂಭ

0

ಪುತ್ತೂರು: ಮೋಟಾರು ಬೈಕ್ ಸೇವೆಯಲ್ಲಿ 123 ವರ್ಷಗಳ ಇತಿಹಾಸವಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಅಧೀಕೃತ ಡೀಲರ್ ಏಸ್ ಮೊಬೈಕ್ಸ್ ಅ.28ರಂದು ಬೊಳುವಾರು ವಿಶ್ವಕರ್ಮ ಸಭಾಭವನದ ಬಳಿಯಿರುವ ಗಣೇಶ್ ಪ್ರಸಾದ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.


ನೂತನ ಶೋ.ರೂಂನ್ನು ಶಾಸಕ ಅಶೋಕ್ ಕುಮಾರ್ ರೈ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ನಂತರ ಪ್ರಥಮ ಗ್ರಾಹಕರಾದ ಬುಲೆಟ್ ಮೆಟಿಯಾರ್ ೩೫೦ನ ಮಹಮ್ಮದ್ ಯೂನುಸ್ ಹಾಗೂ ಹಂಟರ್ 350 ಯ ಮಹಮ್ಮದ್ ಫಾರೂಕ್‌ರವರಿಗೆ ಕೀಲಿ ಕೈ ಹಸ್ತಾಂತರಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಳೆನಾಡು ವಿಭಾಗ ಅಭಿವೃದ್ಧಿ ಅಧ್ಯಕ್ಷ ಎ.ಎಸ್ ಪದ್ಮನಾಭ ಭಟ್ ಮಾತನಾಡಿ, ಬೈಕ್ ರ‍್ಯಾಲಿ ಮೂಲಕ ಹಳ್ಳಿಯಿಂದ ಡೆಲ್ಲಿ ತನಕ ನಲ್ಲಿ ಭಾಗವಹಿಸಿ ನ್ಯಾಷನಲ್ ಚಾಂಪಿಯನ್ ಪಡೆದು ಇಂದು ಪುತ್ತೂರಿನ ಜನತೆಗೆ ಬುಲೆಟ್ ಸೇವೆ ನೀಡುವ ಧೈರ್ಯ ಶ್ಲಾಘನೀಯ. ಸಂಸ್ಥೆಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಬೇಕು ಎಂದರು.


ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಅದರದ್ದೇ ಆದ ಇತಿಹಾಸವಿದೆ. ಅದರದ್ದೇ ಆದ ಜನರಿದ್ದಾರೆ. ರ‍್ಯಾಲಿಯಲ್ಲಿ ಓಡಿಸಿ ಅನುಭವ ಪಡೆದು ಇಂದು ಪುತ್ತೂರಿನಲ್ಲಿ ಶೋರೂಂನ್ನು ಪ್ರಾರಂಭಿಸಿರುವುದಕ್ಕೆ ಅಭಿನಂದಿಸಿದರು.


ಮಂಗಳೂರಿನ ಉದ್ಯಮಿ ಡಾ.ಅಬ್ರಹಾಂ ಝಕಾರಿಯ, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪಂಬೆತ್ತಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಹೇಶ್ ಕರಿಕ್ಕಳ, ಅಹಮ್ಮದ್ ಝಕಾರಿಯ ಮಾತನಾಡಿ ಶುಭಹಾರೈಸಿದರು.


ಉದ್ಯಮಿ ಶಿವರಾಮ ಆಳ್ವ, ಉದ್ಯಮಿ ವಿಕ್ರಮ್ ಪವರ್, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಲಕ್ಷ್ಮಣ್ ಬೈಲಾಡಿ, ಪ್ರಸಾದ್ ಇಂಡಸ್ಟ್ರೀಸ್‌ನ ಮ್ಹಾಲಕ ಶಿವಪ್ರಸಾದ್ ಶೆಟ್ಟಿ, ಸಿಝ್ಲರ್ ಸಾಫ್ಟ್‌ಡ್ರಿಂಕ್ಸ್‌ನ ಮ್ಹಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಭವಿನ್ ಶೇಟ್, ಚಲನಚಿತ್ರ ನಟ ಸುರೇಶ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನಿರ್ದೇಶಕ ರಾಜಶೇಖರ್ ಜೈನ್, ಪುತ್ತೂರು ಕ್ಲಬ್ ಕಾರ್ಯದರ್ಶಿ ದೀಪಕ್ ಕೆ.ಪಿ., ಶೇಟ್ ಇಲೆಕ್ಟ್ರಾನಿಕ್ಸ್‌ನ ಮ್ಹಾಲಕ ರೂಪೇಶ್ ಶೇಟ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು. ಮ್ಹಾಲಕ ಆಕಾಶ್ ಐತಾಳ್ ಅತಿಥಿಗಳನ್ನು ಹೂ ಗುಚ್ಚ ನೀಡಿ ಸ್ವಾಗತಸಿದರು. ನಾಗಶ್ರೀ ಐತಾಳ್ ಸ್ವಾಗತಿಸಿ, ವಂದಿಸಿದರು.
ಎಕ್ಸ್‌ಶೋ.ರೂಂ ಬೆಲೆ ರೂ.1.49 ಲಕ್ಷದಿಂದ ಪ್ರಾರಂಭಗೊಂಡು ರೂ.ರೂ.3.94 ಲಕ್ಷದ ಬುಲೆಟ್ ಬೈಕ್‌ಗಳು ಲಭ್ಯವಿದೆ. ಬುಲೆಟ್‌ನ ವಿಧಗಳಾದ ಬುಲೆಟ್ 350, ಹಂಟರ್ 350, ಕ್ಲಾಸಿಕ್ 350, ಮೆಟಿಯಾರ್ 350, ಗ್ಯುರೆಲ್ಲಾ 450, ಹಿಮಾಲಯ, ಇಂಟರ್‌ಸೆಪ್ಟರ್ ಸೇರಿದಂತೆ 10ಕ್ಕೂ ಅಧಿಕ ವಿಧದ ಬೈಕ್‌ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳ ಸೇಲ್ಸ್, ಸವೀಸ್, ಸ್ಪೇರ‍್ಸ್ ಹಾಗೂ ಎಕ್ಸಸರೀಸ್ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಎಲ್ಲಾ ವಿಧದ ಬುಲೆಟ್ ಬೈಕ್‌ಗಳು ಟೆಸ್ಟ್ ರೈಡ್‌ಗೆ ಲಭ್ಯವಿದೆ. ಬುಕ್ ಮಾಡಿದ ಕೆಲವೇ ದಿನಗಳಲ್ಲಿ ಗ್ರಾಹಕರಿಕೆ ವಿತರಣೆಯಾಗಲಿದೆ. ಅನುಭವೀ ಮೆಕಾನಿಕ್‌ಗಳಿಂದ ಗುಣಮಟ್ಟದ ಸರ್ವೀಸ್ ದೊರೆಯಲಿದೆ. ಅಲ್ಲದೆ ಶೀಘ್ರದಲ್ಲಿಯೇ ಸುಳ್ಯದಲ್ಲಿ ಸಹ ಸಂಸ್ಥೆ ತೆರೆಯಲಾಗುವುದು ಎಂದು ಸಂಸ್ಥೆಯ ಮ್ಹಾಲಕ ಆಕಾಶ್ ಐತಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here