ಪುತ್ತೂರು:ಪುತ್ತೂರಿನ ಪತ್ರಕರ್ತರೊಬ್ಬರ ಮೊಬೈಲ್ ಹ್ಯಾಕ್ ಮಾಡಿರುವ ಮತ್ತು ವಿಷಯ ತಿಳಿದ ಪತ್ರಕರ್ತ ತಕ್ಷಣ ತನ್ನ ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿ ಹ್ಯಾಕರ್ ಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಪುತ್ತೂರಿನ ಪತ್ರಕರ್ತರೊಬ್ಬರು ತಾನು ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯ ಕಚೇರಿ ವಾಟ್ಸಪ್ ಗ್ರೂಪ್ ನಲ್ಲಿ ಬಂದ ಸಂದೇಶಕ್ಕೆ ಸ್ಪಂಧಿಸಿದಾಗ ಕೆಲವೇ ಕ್ಷಣದಲ್ಲಿ ಅವರ ಮೊಬೈಲ್ ಹ್ಯಾಕರ್ ನಿಯಂತ್ರಣಕ್ಕೆ ಬಂದಿತ್ತು. ಈ ಕುರಿತು ಪರಿಶೀಲಿಸಿದಾಗ ಪತ್ರಿಕಾ ಕಚೇರಿಯ ನಿಷ್ಕ್ರೀಯವಾದ ಹಳೆಯ ಮತ್ತು ಚಾಲ್ತಿಯಲ್ಲಿಲ್ಲದ ವಾಟ್ಸಪ್ ಗ್ರೂಪ್ ನಿಂದ ಬಂದ ಸಂದೇಶ ಎಂದು ಮತ್ತೆ ಗೊತ್ತಾಗಿದೆ. ತಕ್ಷಣ ಎಚ್ಚೆತ್ತ ಪತ್ರಕರ್ತ ತನ್ನ ಬ್ಯಾಂಕ್ ಖಾತೆಯನ್ನು ಮತ್ತು ತನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡುವ ಮೂಲಕ ಹ್ಯಾಕರ್ ನಿಂದ ಪಾರಾಗಿದ್ದಾರೆ. ಈ ಕುರಿತು ಪತ್ರಕರ್ತ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.