ರಾಮಕುಂಜ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇದರ ಸಹಯೋಗದಲ್ಲಿ ಅ.28 ಮತ್ತು 29ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಬಾಲಕರ ತಂಡ ಪ್ರಥಮ ಸಮಗ್ರ, 14ರ ವಯೋಮನದ ಶಾಲಾ ಬಾಲಕರ ತಂಡ ದ್ವಿತೀಯ ಸಮಗ್ರ ಹಾಗೂ ಪ್ರಾಥಮಿಕ ಶಾಲಾ ಬಾಲಕರ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಸಂಸ್ಥೆಯ 43 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ 6, 14ರ ವಯೋಮಾನದ ವಿಭಾಗದಲ್ಲಿ 6 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 12 ವಿದ್ಯಾರ್ಥಿಗಳು ವಿವಿಧ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಮೋಕ್ಷಿತ್ 200ಮೀ. ಓಟ ಪ್ರಥಮ, ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 14ರ ವಯೋಮಾನದ ವಿಭಾಗದಲ್ಲಿ ಗುರುಕಿರಣ್ ಗುಂಡು ಎಸೆತ ಪ್ರಥಮ, ಗಗನ್ ಎತ್ತರ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಕಿರಣ್ ಜಾವೆಲಿನ್ ಎಸೆತ ಪ್ರಥಮ, ಭರತ್ ಕುಮಾರ್ 1500 ಮೀ. ಓಟ ಪ್ರಥಮ, 3000ಮೀ ಓಟ ಪ್ರಥಮ ಮತ್ತು ನಡಿಗೆ ಪ್ರಥಮ, ಧ್ರುವ ನಡಿಗೆ ದ್ವಿತೀಯ, ನಿತೀಶ್ ಗುಂಡು ಎಸೆತ ದ್ವಿತೀಯ, ಸುಹಾಸ್ ರಾಮ್ ಎತ್ತರ ಜಿಗಿತ ದ್ವಿತೀಯ, ನಿತಿನ್ ಕೋಲು ಜಿಗಿತ ಪ್ರಥಮ, ಕಿಶೋರ್ ಬಿ.ಕೆ ಕೋಲು ಜಿಗಿತ ದ್ವಿತೀಯ, ಮನೋಜ್ ಹ್ಯಾಮರ್ ಎಸೆತ ಪ್ರಥಮ, ಉಲ್ಲಾಸ್ ಹರ್ಡಲ್ಸ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭರತ್ ಕುಮಾರ್ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ನ.೪ ಹಾಗೂ ೫ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮಾ ಬಿ, ರಾಘವ್, ದಿವ್ಯಾ ಪಿ.ಎನ್, ಕಿಶನ್ ರಾಜ್ರವರು ತರಬೇತಿ ನೀಡಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ, ವ್ಯವಸ್ಥಾಪಕ ರಮೇಶ್ ರೈ ಆರ್.ಬಿ., ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕ-ಶಿಕ್ಷಕೇತರರು ಶುಭಹಾರೈಸಿದ್ದಾರೆ.