ಪುತ್ತೂರು; ಆರೋಗ್ಯ ರಕ್ಷಾ ಸಮಿತಿ ಸಂಪ್ಯ, ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ, ನವಚೇತನಾ ಯುವಕ ಮಂಡಲ ಶ್ರೀರಾಮನಗರ ಸಂಪ್ಯ ಇವುಗಳ ನೇತೃತ್ವದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 32ನೇ ಉಚಿತ ವೈದ್ಯಕೀಯ ನ.3ರಂದು ನಡೆಯಿತು.
ಈ ಭಾರಿಯ ಶಿಬಿರದಲ್ಲಿ ಸಂಪ್ಯ ನವಚೇತನಾ ಯುವಕ ಮಂಡಲದ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ವಿಭಾಗ) ಮಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ) ಸೆಂಚುರಿ ಗ್ರೂಪ್ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ವಿಶೇಷವಾಗಿ ನೆರವೇರಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಮಾತನಾಡಿ, ಸೇವಾ ರೂಪದಲ್ಲಿ ಭಕ್ತಾಧಿಗಳಿಗೆ ಆರೋಗ್ಯ ಸೇವೆ ಕಾರ್ಯಗಳನ್ನು ನೀಡುತ್ತಿರುವುದು ಶ್ಲಾಘನೀಯ. ಎಲ್ಲರೂ ಒಟ್ಟು ಸೇರಿ ಕುಟುಂಬದ ಮಾದರಿಯಲ್ಲಿ ಶಿಬಿರದಲ್ಲಿ ಭಾಗವಹಿಸುತ್ತಿರುವಿದಕ್ಕೆ ಅಭಿನಂದಿಸಿದ ಇನ್ನಷ್ಟು ಮಂದಿ ಅರ್ಹರು ಶಿಬಿರ ಪ್ರಯೋಜನ ಪಡೆದುಕೊಳ್ಳಲಿ ಎಂದರು.
ಪ್ರಸಾದ್ ನೇತ್ರಾಲಯದ ಡಾ.ಅಂಬಿಕಾ ಮಾತನಾಡಿ, ಕಣ್ಣಿನ ಸುರಕ್ಷತೆ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಆರೋಗ್ಯ ಎಲ್ಲರಿಗೂ ಬಹು ಮುಖ್ಯ. ಅದರಲ್ಲಿಯು ಕಣ್ಣು ಬಹುಮುಖ್ಯ ಅಂಗ. ಅದನ್ನು ಯಾರೂ ತಾತ್ಸಾರ ಮಾಡಬಾರದು. ವರ್ಷಕ್ಕೆ ಒಂದು ಬಾರಿಯಾದರೂ ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂದರು. ಕಳೆದ 32 ತಿಂಗಳುಗಳಿಂದ ಶಿಬಿರವು ಯಾವುದೇ ವ್ಯತ್ಯಾಸವಾಗದೆ ನಿರಂತರವಾಗಿ ನಡೆಯುತ್ತಿದೆ. ಜನತೆಯ ಆವಶ್ಯಕತೆ ತಕ್ಕಂತೆ ಶಿಬಿರದಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಶಿಬಿರವು ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಐಕ್ಯ ಕಲಾ ಸೇವಾ ಟ್ರಸ್ಟ್ ನ ಚೇತನ್ ಪ್ರಾರ್ಥಿಸಿದರು. ನವಚೇತನಾ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿದರು. ನಿಕಟಪೂರ್ವ ಉಮೇಶ್ ಎಸ್.ಕೆ ವಂದಿಸಿದರು. ಉದಯ ಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿದರು.
ಈ ಭಾರಿಯ ಶಿಬಿರದಲ್ಲಿ ಸಂಪ್ಯ ನವಚೇತನಾ ಯುವಕ ಮಂಡಲದ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ವಿಭಾಗ) ಮಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ಸೆಂಚುರಿ ಗ್ರೂಪ್ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ವಿಶೇಷವಾಗಿ ನೆರವೇರಿತು.
200 ಮಂದಿ ಶಿಬಿರದಲ್ಲಿ ಭಾಗಿ;
ಶಿಬಿರದಲ್ಲಿ ಕಣ್ಣಿನ ತಪಾಸಣೆ ನಡೆಸಲಾಯಿತು. ಆವಶ್ಯಕತೆಯಿರುವವರಿಗೆ ರೀಡಿಂಗ್ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಸುಮಾರು ಇಪ್ಪತ್ತೈದಕ್ಕೂ ಅಧಿಕ ಮಂದಿಗೆ ಪೊರೆ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದ್ದು ಅವರಿಗೆ ಉಚಿತ ಪೊರೆ ಶಸ್ತ್ರ ಚಿಕಿತ್ಸೆಯೂ ನಡೆಯಲಿದೆ. ಉಳಿದಂತೆ ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಇ.ಓ.ಖಿ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಔಷಧಿಗಳ ಉಚಿತ ವಿತರಣೆ ನಡೆಸಲಾಯಿತು. ಸುಮಾರು200 ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು. ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಆರೋಗ್ಯ ರಕ್ಷಾ ಸಮಿತಿ, ನವಚೇತನಾ ಯುವಕ ಮಂಡಲ, ಐಕ್ಯಕಲಾಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ ಇದರ ಸದಸ್ಯರು, ಜನೌಷಧ ಕೇಂದ್ರಗಳು ಹಾಗೂ ದೇವಸ್ಥಾನದ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು.