ದೇರ್ಲದ ಸುರಭಿ ಗೋಶಾಲೆಯಲ್ಲಿ ಗೋಪೂಜಾ ಕಾರ್ಯಕ್ರಮ

0

puttur: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇವರು ದೇರ್ಲದ ಸುರಭಿ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ಆಯೋಜಿಸಿದ್ದ ‘ದೀಪಾವಳಿ ಗೋಪೂಜೆ’ ಕಾರ್ಯಕ್ರಮವು ನವೆಂಬರ್ 2ರಂದು ಜರುಗಿತು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದೂಷಿ ಪ್ರೀತಿಕಲಾ ಇವರ ಶಿಷ್ಯೆಯರಾದ ಅಕ್ಷರಿ ಹಾಗೂ ಮಾತಂಗಿ ಇವರಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಿತು. ಬಳಿಕ ತೆಂಕುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ಸುರಭಿ ಮಹಿಮಾ’ ಎಂಬ ತಾಳಮದ್ದಳೆ ಸಂಪನ್ನಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ್ ಭಟ್ ಪುತ್ತೂರು, ಚೆಂಡೆ-ಮದ್ದಳೆಯಲ್ಲಿ ಗಿರೀಶ ಭಟ್ ಕಿನಿಲಕೋಡಿ ಮತ್ತು ಕಿಶನ್ ಡಿ. ಸಹಕರಿಸಿದರು. ಮುಮ್ಮೇಳದಲ್ಲಿ ವಿದ್ವಾನ್ ಗ.ನಾ. ಭಟ್ಟ ಮೈಸೂರು, ಗಣರಾಜ ಕುಂಬ್ಳೆ, ಡಾ. ಶ್ರೀಪತಿ ಕಲ್ಲೂರಾಯ ಪುತ್ತೂರು, ರವಿಶಂಕರ ವಳಕ್ಕುಂಜ ಇವರು ಭಾಗವಹಿಸಿದರು. ದ್ವಾರಕಾ ಕಲಾಶಾಲೆಯ ಬಾಲ ಪ್ರತಿಭೆಗಳಾದ ನಿಯತಿ ಭಟ್, ಆದಿತ್ಯ ಕೃಷ್ಣ, ಸುರಭಿ ಚೂಂತಾರು, ರಶ್ಮಿ ಹಾಗೂ ಅಭಿನವ ಆಚಾರ್ಯ ಭಾಗವಹಿಸಿದರು.

ತಾಳಮದ್ದಳೆ ಮುಗಿದ ಬಳಿಕ ಗೋ ಪೂಜೆ ಸಂಪನ್ನಗೊಂಡಿತು. ಆದಿತ್ಯಕೃಷ್ಣ ಮತ್ತು ನಿಯತಿ ಭಟ್ ಪ್ರಾರ್ಥಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಅಮೃತಕೃಷ್ಣ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷರಿ ಸ್ವಾಗತಿಸಿ, ಅನುಪಮಾ ವಂದಿಸಿದರು. ಅವನೀಶಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು. ಬಂಧು ಬಾಂಧವರು, ಪ್ರತಿಷ್ಠಾನದ ಹಿತೈಷಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದರು.

LEAVE A REPLY

Please enter your comment!
Please enter your name here