ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ವತಿಯಿಂದ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ನ.17ರಂದು ಆಯೋಜಿಸಲಾಗಿದೆ.
ನಗರದ ಪುರಭವನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ದೇಶಭಕ್ತಿ ಗೀತೆ(ಸಮೂಹ), ಜಾನಪದ ನೃತ್ಯ(ಸಮೂಹ), ದೇಶಭಕ್ತಿ ನೃತ್ಯ ರೂಪಕ ಮತ್ತು ನಿರೂಪಣೆ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮೊದಲು ನೊಂದಾಯಿಸಿದ ಪ್ರಾಥಮಿಕ ಶಾಲಾ ವಿಭಾಗದ 8 ತಂಡ, ಪ್ರೌಢಶಾಲಾ ವಿಭಾಗದ 8 ತಂಡ ಹಾಗೂ ಪದವಿಪೂರ್ವ ವಿಭಾಗದ 8 ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ತಂಡದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಯಾವುದೇ ಮಿತಿ ಇರುವುದಿಲ್ಲ. ಪ್ರತೀ ವಿದ್ಯಾ ಸಂಸ್ಥೆಯಿಂದ ಭಾಗವಹಿಸುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯನ್ನು ನವೆಂಬರ್.11ರ ಒಳಗಾಗಿ ಸಂಸ್ಥೆಯ ವಾಟ್ಸಾಪ್ ಮೂಲಕ 8904561447, 9448536143 ನಂಬರ್ ಗೆ ಮಾಹಿತಿ ನೀಡಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸರಕಾರಿ/ಅನುದಾನಿತ/ಖಾಸಗಿ ಶಾಲೆ ಕಾಲೇಜುಗಳಿಗೆ ಮುಕ್ತ ಅವಕಾಶವಿದೆ. ಪ್ರತೀ ಶಾಲಾ ಕಾಲೇಜುಗಳಿಗೆ 20+5 ನಿಮಿಷದ ಸಮಯಾವಕಾಶ ನೀಡಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು ತಮಗೆ ಬೇಕಾದ ವೇಷಭೂಷಣಗಳನ್ನು ಧರಿಸಿ ಬರತಕ್ಕದ್ದು. ವಿಜೇತ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರತಿ ಶಾಲಾ ಕಾಲೇಜುಗಳಿಗೆ ಸ್ಮರಣಿಕೆಯನ್ನು ನೀಡಲಾಗುವುದು. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಗತಿ ಸ್ಟಡಿ ಸೆಂಟರ್ನ ಪ್ರಕಟಣೆಯಲ್ಲಿ ತಿಳಿಸಿದೆ.