ಶಾಖೆಪುರ ಕಾಲೋನಿಯಲ್ಲಿ ಸಾಮರಸ್ಯದ ತುಡರ್

0

ಹಿರೇಬಂಡಾಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ಗತಿನಿಧಿ ವಿಭಾಗದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಹಿರೇಬಂಡಾಡಿ ಗ್ರಾಮದ ಶಾಖೆಪುರ ಕಾಲೋನಿಯ ಲೋಕಯ್ಯರವರ ಮನೆಯಲ್ಲಿ ಸಾಮರಸ್ಯದ ತುಡರ್ ಕಾರ್ಯಕ್ರಮ ನಡೆಯಿತು.


ಸಮಾರಂಭದಲ್ಲಿ ಬೌದ್ಧಿಕ್ ನೀಡಿದ ಪುತ್ತೂರು ಜಿಲ್ಲಾ ಸಾಮರಸ್ಯ ಸಹ ಸಂಯೋಜಕ್ ಡಾ.ರವೀಶ್ ಪಡುಮಲೆ ಅವರು, ನಮ್ಮಲ್ಲಿರುವ ಕೀಳರಿಮೆ ಮತ್ತು ದುಶ್ಚಟಗಳನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು. ಜಗತ್ತಿನಲ್ಲಿ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಭಾರದಲ್ಲಿ ಹಲವಾರು ಅನಿಷ್ಟ ಪದ್ಧತಿ, ಆಚರಣೆಗಳನ್ನು ಕೈಬಿಡಲಾಗಿದೆ. ಆದರೂ ಸಮಾಜದಲ್ಲಿ ಇಂದಿಗೂ ಉಳಿದಿರುವ ಅಸ್ಪ್ರಶ್ಯತೆ ಎಂಬ ಪಿಡುಗನ್ನು ಹೋಗಲಾಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಹೋಗಲಾಡಿಸುವ ಭಾಗವೇ ಸಾಮರಸ್ಯ ವೇದಿಕೆ. ವೇದಿಕೆ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಲಾಗುವುದು ಎಂದು ಹೇಳಿದರು.


ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರಿನ ಸಾದ್ವಿ ಶ್ರೀ ಮಾತಾನಂದಮಯಿ ಅವರು, ಹಿಂದೂ ಸಮಾಜದಲ್ಲಿ ನಾವೆಲ್ಲರೂ ಮೇಲು-ಕೀಳು ಎಂಬ ಭಾವನೆ ಬಿಟ್ಟು ಒಂದಾಗಿ ಬಾಳೋಣ. ಆ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡೋಣ ಎಂದು ನುಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಸನ್ನ ದರ್ಬೆ, ಹೊನ್ನಪ್ಪ ಖಂಡಿಗ, ವಿನಯಕುಮಾರ್ ರೈ ಪಟ್ಟೆ, ಕೆ.ಟಿ.ಪೂಜಾರಿ, ನೀಲಯ್ಯ ಸರೋಳಿ, ದಾಮೋದರ ಪಾಜಳಿಕೆ, ರಮೇಶ್ ಪೆರ್ಲ, ಸೋಮೇಶ್ ಕೇಪುಳು, ಜಗದೀಶ ಕೇಪುಳು, ಮೋಹನ ಪೆರ್ಲ, ಜನಾರ್ದನ ಸರೋಳಿ, ಪವನ್ ಪಡಿಲ್, ನವೀನ್ ನೂಜಿಮಾರು, ಧನಂಜಯ ಮುಡಿಪು, ರೋಹಿತ್ ಸರೋಳಿ, ದಯಾನಂದ ಸರೋಳಿ, ಉಮೇಶ ನೂಜಿಮಾರು, ನವೀನ್ ಪೆರಾಬೆ, ಸಾಮರಸ್ಯ ಪುತ್ತೂರು ಜಿಲ್ಲೆಯ ಸಂಯೋಜಕ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಬಾಲಕೃಷ್ಣ ಮೇನಾಲ ಸ್ವಾಗತಿಸಿದರು. ಯದುಶ್ರೀ ಆನೆಗುಂಡಿ ವಂದಿಸಿದರು.

ದೀಪ ಪ್ರಜ್ವಲನೆ:
ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ದೀಪ ಜ್ಯೋತಿಯೊಂದಿಗೆ ಶಾಖೆಪುರ ಕಾಲೋನಿಗೆ ಆಗಮಿಸಲಾಯಿತು. ಬಳಿಕ ಕಾಲೋನಿಯ ದೈವಸ್ಥಾನದಲ್ಲಿ ದೀಪಗಳನ್ನು ಸಾಧ್ವಿ ಶ್ರೀ ಮಾತಾನಂದಮಯಿ ಅವರು ಕಾಲೋನಿಯ ಆರು ಮನೆಯವರಿಗೆ ಹಸ್ತಾಂತರ ಮಾಡಿ ಆ ಮನೆಗಳಲ್ಲಿ ದೀಪ ಪ್ರಜ್ವಲಿಸಲಾಯಿತು. ಸಮಾರಂಭದ ಬಳಿಕ ಲೋಕಯ್ಯ ಅವರ ಮನೆಯಲ್ಲಿ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here