ಪುತ್ತೂರು: ಪುತ್ತೂರು ನಗರ ಹಾಗೂ ಕುಂಬ್ರ ಗ್ರಾಮಾಂತರ ಉಪವಿಭಾಗ ಮಟ್ಟದ ಮೆಸ್ಕಾಂ ಜನ ಸಂಪರ್ಕ ಸಭೆಯು ಮಂಗಳೂರು ವೃತ್ತ ಕಛೇರಿ ಅಧೀಕ್ಷಕ ಇಂಜಿನಿಯರ್ (ವಿ) ಅಧ್ಯಕ್ಷತೆಯಲ್ಲಿ ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ನ.7ರಂದು ಪೂರ್ವಾಹ್ನ 11:00 ಗಂಟೆಯಿದ ಅಪರಾಹ್ನ 12:00 ಗಂಟೆಯವರೆಗೆ ನಡೆಯಲಿದೆ.
ಗ್ರಾಹಕರು ಪುತ್ತೂರು ನಗರ ಉಪವಿಭಾಗ ಕಚೇರಿಯಲ್ಲಿ ಮತ್ತು ದೂರವಾಣಿ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು. ಕಛೇರಿ ಸ್ಥಿರ ದೂರವಾಣಿ ಸಂಖ್ಯೆ:08251 230393ಯನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.