ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ತರಬೇತಿ ಸಂಸ್ಧೆ ಸ್ಕೈ ಬರ್ಡ್ ಏವಿಯೇಷನ್‌ನ ಅಧಿಕೃತ ಪ್ರಾಂಚೈಸಿ ಸಂಸ್ಧೆಯಾಗಿ ಪುತ್ತೂರಿನ ಎಪಿಎಂಸಿ ರಸ್ತೆಯ ಮಾನೈ ಆರ್ಕ್ ಕಟ್ಟಡದಲ್ಲಿ ಉದ್ಘಾಟನೆಗೊಂಡ ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ತರಗತಿಗಳು ನ.13ರಿಂದ ಆರಂಭಗೊಳ್ಳಲಿದೆ.
30 ವಿದ್ಯಾರ್ಥಿಗಳನ್ನೊಳಗೊಂಡ ಮೊದಲ ಬ್ಯಾಚ್‌ಗೆ ನ.13 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ವಿಮಾನಯಾನ ಕ್ಷೇತ್ರದ ವಿವಿಧ ವಿಭಾಗದಲ್ಲಿ ತರಬೇತಿ ನಡೆಯಲಿದ್ದು, ದ್ವಿತೀಯ ಬ್ಯಾಚ್‌ಗೆ ವಿದ್ಯಾರ್ಥಿಗಳ ನೋಂದಣಿ ಮುಂದುವರಿದಿದೆ.
100% ಉದ್ಯೋಗದ ಭರವಸೆಯೊಂದಿಗೆ ಕ್ಯಾಬಿನ್ ಕ್ರ್ಯೂ, ಮ್ಯಾನೇಜ್‌ಮೆಂಟ್, ಗ್ರೌಂಡ್ ಹ್ಯಾಂಡ್ಲಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪದವಿ ಮತ್ತು ಡಿಪ್ಲೋಮ ಕೋರ್ಸ್ಗಳನ್ನ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದು ಶೀರ್ಘ್ರದಲ್ಲಿಯೇ 2ನೇ ಬ್ಯಾಚ್‌ನ ತರಗತಿಗಳು ಆರಂಭಗೊಳ್ಳಲಿದೆ ಎಂದು ಸಂಸ್ಧೆಯ ಆಡಳಿತಾಧಿಕಾರಿ ಸ್ನಿಗ್ಧ ಆಳ್ವ ತಿಳಿಸಿದ್ದಾರೆ.