ಬೆಟ್ಟಂಪಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಜ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿಯ ವಿದ್ಯಾರ್ಥಿಗಳಾದ ಫಾತಿಮತ್ ರಿಝ್ವಾನ ಹಿಂದಿ ಕಂಠಪಾಠ (ಪ್ರಥಮ), ಲಿಖಿತಾ ಕೆ ಧಾರ್ಮಿಕ ಪಠಣ ಸಂಸ್ಕೃತ (ಪ್ರಥಮ), ವತ್ಸಲಾ ದೇಶಭಕ್ತಿ ಗೀತೆ (ಪ್ರಥಮ), ವರ್ಷಾ ಕೆ ಚಿತ್ರಕಲೆ (ಪ್ರಥಮ), ವಿಯೋಲ್ಲಾ ಮೆಲಿಷಾ ಕವನ ವಾಚನ (ಪ್ರಥಮ), ಮುಹಮ್ಮದ್ ಆಬಿದ್ ಶಾ ಚಿತ್ರಕಲೆ (ಪ್ರಥಮ), ಅನ್ವಿತಾ ಆರ್. ಪಿ. ನಾಯ್ಕ ಅಭಿನಯ ಗೀತೆ ( ಪ್ರಥಮ), ಫಾತಿಮತ್ ಸಹ್ ಲ ಟಿ. ಎಂ. ಪ್ರಬಂಧ ರಚನೆ (ದ್ವಿತೀಯ), ಅಮೂಲ್ಯ ಅಭಿನಯ ಗೀತೆ (ದ್ವಿತೀಯ), ಅಪೇಕ್ಷ ಎಸ್ ಎಂ ಭಕ್ತಿಗೀತೆ (ದ್ವಿತೀಯ), ಶ್ರಾವ್ಯ ಮಿಮಿಕ್ರಿ (ದ್ವಿತೀಯ), ಅಮೂಲ್ಯ ಕನ್ನಡ ಕಂಠಪಾಠ ( ದ್ವಿತೀಯ),ಆದ್ಯಾ.ಕೆ ಕಥೆ ಹೇಳುವುದು (ದ್ವಿತೀಯ), ಆರಾಧ್ಯ ಬಾಜುಗುಳಿ ಭಕ್ತಿಗೀತೆ (ದ್ವಿತೀಯ), ಹಾಫಿಯಾ ಇಂಗ್ಲಿಷ್ ಕಂಠಪಾಠ (ತೃತೀಯ), ವರ್ಷಾ ಕಥೆ ಹೇಳುವುದು (ತೃತೀಯ), ಗೌತಮ್ ಪಿ ಆಶುಭಾಷಣ (ತೃತೀಯ), ಶ್ರೀ ರೂಪ್ ದೇಶಭಕ್ತಿ ಗೀತೆ (ತೃತೀಯ), ವಿಶ್ಮಿತಾ ಮರಿಯಾ ಇಂಗ್ಲಿಷ್ ಕಂಠಪಾಠ (ತೃತೀಯ) ಬಹುಮಾನವನ್ನು ಗಳಿಸಿ ಹಿರಿಯರ ವಿಭಾಗದ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ ಎಂದು ಮುಖ್ಯ ಗುರು ಲಿಂಗಮ್ಮ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕನಾಥ ಆಚಾರ್ಯ ತಿಳಿಸಿದ್ದಾರೆ.